Index   ವಚನ - 163    Search  
 
ಬಳಿಕ್ಕಂ ಶುಕ್ಲವರ್ಣವಾದೊಂದನೆಯ ಕೇವಲಹೃದಯವೆ ಈಶಾನನೆನಿಕುಂ. ತಪ್ತಕಾಂಚನವರ್ಣವಾದೆರಡನೆಯ ಜ್ಞಾನಹೃದಯವೆ ಈಶ್ವರನೆನಿಕುಂ. ಪೀತವರ್ಣವಾದ ಮೂರನೆಯ ಯೋಗಜಹೃದಯವೆ ಬ್ರಹ್ಮವೆನಿಕುಂ. ರತ್ನವರ್ಣವಾದ ನಾಲ್ಕನೆಯ ಭೂತಜಹೃದಯವೆ ಮತ್ತೆಯುವಿೂಶ್ವರವೆನಿಕುಂ. ಶುದ್ಧ ಸ್ಫಟಿಕವರ್ಣವಾದ ಕಾಮದಹೃದಯವೆ ಸಾದಾಖ್ಯತತ್ವವೆನಿಕುಮೆಂದು, ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.