ಮತ್ತಂ ಮಂತ್ರರೂಪಮೆಂತೆನೆ,
ಮಂತ್ರದಾದಿಯೆ ಶಿರಸ್ಸು.
ಮಂತ್ರದುಪರಿಯೆ ಮುಖ.
ಮಂತ್ರ ಬಾಹ್ಯಂಗಳೆ ಉಭಯ ಪಾರ್ಶ್ವಂಗಳಾ-
ಮಂತ್ರದಧೋಭಾಗವೆ ಆಸನಂ.
ಮಂತ್ರದುಪರಿಯಲ್ಲಿಯ ವಾಮದಕ್ಷಿಣಚತುಃಪಾರ್ಶ್ವಂಗಳೆ
ಚಕ್ಷು ಶ್ರೋತ್ರಂಗಳ್.
ತನ್ಮಧ್ಯವೆ ನಾಸಿಕೆ. ತದೂರ್ಧ್ವವೆ ನೊಸಲ್ಬಿಂದುವೆ ಮಸ್ತಕಂ.
ನಾದವೆ ಜಿಹ್ವೆ. ರ್ನಾಬ್ದವೆ ಶಬ್ದಮಾ
ಶಬ್ದ ಸ್ಪಂದ ನಾ[ದ]ವದುದರವೆ ಓಷ್ಠವದು
ಶಬ್ದದಿಂ ಭಿನ್ನವಾದ ಮುಖಾಂತರಯುತಮೆನಿಕುಂ.
ಪ್ರಣವಾಂತದಲ್ಲಿಯುಂ, ಮಂತ್ರಪಲ್ಲವಾಂತದಲ್ಲಿಯು
ಹಿಂಭಾಗದಲ್ಲಿಯು ಕೂಡಿರ್ಪುದೆ ಮಂತ್ರರೂಪವೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
Art
Manuscript
Music
Courtesy:
Transliteration
Mattaṁ mantrarūpamentene,
mantradādiye śiras'su.
Mantradupariye mukha.
Mantra bāhyaṅgaḷe ubhaya pārśvaṅgaḷā-
mantradadhōbhāgave āsanaṁ.
Mantradupariyalliya vāmadakṣiṇacatuḥpārśvaṅgaḷe
cakṣu śrōtraṅgaḷ.
Tanmadhyave nāsike. Tadūrdhvave nosalbinduve mastakaṁ.
Nādave jihve. Rnābdave śabdamā
śabda spanda nā[da]vadudarave ōṣṭhavadu
śabdadiṁ bhinnavāda mukhāntarayutamenikuṁ.
Praṇavāntadalliyuṁ, mantrapallavāntadalliyu
himbhāgadalliyu kūḍirpude mantrarūpavendu
niravisideyayyā, paraśivaliṅgayya.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ