ವಾಗ್ಬ್ರಹ್ಮಿಗಳೆಲ್ಲರು ಪಡುವ ಪಾಟ ನೋಡಿ ನಮ್ಮ ಭಕ್ತರು,
ತ್ಯಾಗಾಂಗದಲ್ಲಿ, ಇಷ್ಟ ಪ್ರಾಣ ಭಾವಕ್ಕೆ ಬಾಹ್ಯ ಪದಾರ್ಥರೂಪವ
ಈ ಕ್ಷಣ ಜ್ಞಾನಸ್ಪರ್ಶದಿಂದ ಅರ್ಪಿಸಿ ದೇಹಪ್ರಸಾದಿಗಳಾಗಿ
ಚರಶೇಷದಲ್ಲಿ ಇಷ್ಟಲಿಂಗಪೂಜಕರಾಗಿ ಅನಿಷ್ಟವ ಪರಿಹರಿಸಿದರು.
ಭೋಗಾಂಗದಲ್ಲಿ ಇಷ್ಟ ಪ್ರಾಣ ಭಾವಕ್ಕೆ ದೇಹಪದಾರ್ಥರೂಪವ
ರೂಪು ರುಚಿ ತೃಪ್ತಿಯಿಂದ ಅರ್ಪಿಸಿ ಪ್ರಾಣಪ್ರಸಾದಿಗಳಾಗಿ,
ಲಿಂಗಶೇಷದಲ್ಲಿ ಪ್ರಾಣಲಿಂಗ ನೈಷ್ಠಿಕರಾಗಿ
ವಾಯುಗುಣವಿಕಾರವ ಕೆಡಿಸಿದರು.
ಯೋಗಾಂಗದಲ್ಲಿ ಇಷ್ಟ ಪ್ರಾಣ ಭಾವಕ್ಕೆ ವಾಯು ಪದಾರ್ಥರೂಪವ
ಸ್ಥೂಲ ಸೂಕ್ಷಕಾರಣದಿಂದ ಅರ್ಪಿಸಿ ಮಹಾಪ್ರಸಾದಿಗಳಾಗಿ,
ಗುರುಶೇಷದಲ್ಲಿ ಮನೋಗುಣ ವಿಕಾರ ಪರಿಹರಿಸಿದರು
ಗುಹೇಶ್ವರಲಿಂಗದಲ್ಲಿ.
Transliteration Vāgbrahmigaḷellaru paḍuva pāṭa nōḍi nam'ma bhaktaru,
tyāgāṅgadalli, iṣṭa prāṇa bhāvakke bāhya padārtharūpava
ī kṣaṇa jñānasparśadinda arpisi dēhaprasādigaḷāgi
caraśēṣadalli iṣṭaliṅgapūjakarāgi aniṣṭava pariharisidaru.
Bhōgāṅgadalli iṣṭa prāṇa bhāvakke dēhapadārtharūpava
rūpu ruci tr̥ptiyinda arpisi prāṇaprasādigaḷāgi,
liṅgaśēṣadalli prāṇaliṅga naiṣṭhikarāgi
vāyuguṇavikārava keḍisidaru.Yōgāṅgadalli iṣṭa prāṇa bhāvakke vāyu padārtharūpava
sthūla sūkṣakāraṇadinda arpisi mahāprasādigaḷāgi,
guruśēṣadalli manōguṇa vikāra pariharisidaru
guhēśvaraliṅgadalli.
Hindi Translation सब वाक्ब्रह्मि भोगने की स्थिति देख हमारे भक्त,
त्यागांग में, इष्ट प्राण भाव को बाह्य पदार्थ रूप
ईक्षण ज्ञान स्पर्श से अर्पितकर देह प्रसादी बने,
चरशेष में इष्टलिंग पूजक बने अनिष्ट को दूर किया।
भोगांग में इष्ट प्राण भाव को देह पदार्थ रूप
रूप-रुचि-तृप्ति से अर्पितकर प्राण प्रसादी बने।
लिंगशेष में प्राणलिंग निष्टा बने वायु गुणविकार।
योगांग में इष्टप्राण भाव को वायु पदार्थ रूप बिगाडे
स्थूल सूक्ष्म कारण से अर्पितकर महाप्रसादि बने
गुरु शेष में मनोगुण विकार दूरकिया।
गुहेश्वर लिंग में।
Translated by: Eswara Sharma M and Govindarao B N