ಎನ್ನ ತಂದೆಯ ಬಸುರಲ್ಲಿ ಬಂದಳೆಮ್ಮವ್ವೆ
ಎನ್ನ ತಂಗಿಯರಿಬ್ಬರೂ ಹೆಂಡಿರಾದರೆನಗೆ.
ಎನ್ನ ಸತಿಯರು ಎನ್ನ ಮದವಳಗಿತ್ತಿಯ ಮಾಡಿ
ಎಮ್ಮಪ್ಪಗೆ ಮದುವೆಯ ಮಾಡಿದರು.
ಎನ್ನ ಗಂಡನ ಮನೆಯೊಡವೆಯನೆನ್ನ ಉಗುರು ಕಣ್ಣಿನಲ್ಲೆತ್ತಿ
ಒಗೆತನವ ಮಾಡುವೆನು.
ಎಮ್ಮಕ್ಕನ ಕೈಯಿಂದ ಎನ್ನ ಗಂಡನ ಹೆಂಡತಿಯೆನಿಸಿಕೊಂಬೆನು.
ಎನ್ನ ಗಂಡ ಆಳಲಿ ಆಳದೆ ಹೋಗಲಿ
ಪತಿಭಕ್ತಿಯ ಬಿಡೆ ಕಣಾ
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.
Art
Manuscript
Music
Courtesy:
Transliteration
Enna tandeya basuralli bandaḷem'mavve
enna taṅgiyaribbarū heṇḍirādarenage.
Enna satiyaru enna madavaḷagittiya māḍi
em'mappage maduveya māḍidaru.
Enna gaṇḍana maneyoḍaveyanenna ugurukaṇṇinalletti
ogatanava māḍuvenu.
Em'makkana kaiyinda enna gaṇḍana heṇḍatiyenisikombenu.
Enna gaṇḍa āḷali āḷade hōgali
patibhaktiya biḍe kāṇā
ghanaliṅgiya mōhada cennamallikārjuna.