ಅದ್ಭುತವೆಂಬ ಪಿಶಾಚಿ ಮೂರುಲೋಕವನವಗ್ರಹಿಸಿತ್ತಯ್ಯಾ!
ಆ ಅದ್ಭುತದೊಳಗೊಂದು ಗ್ರಹ,
ನಿರಂತರ ನಲಿದಾಡುತ್ತಿದ್ದಿತ್ತಯ್ಯಾ!
ವಜ್ರಯೋಗಿ ಖಗರಂಧ್ರಪುರದಲ್ಲಿ,
ಗುಹೇಶ್ವರಲಿಂಗವು ತಾನೆ ನೋಡಾ.
Transliteration Adbhutavemba piśāci mūrulōkavanavagrahisittayyā!
Ā adbhutadoḷagondu graha,
nirantara nalidāḍuttiddittayyā!
Vajrayōgi khagarandhrapuradalli,
guhēśvaraliṅgavu tāne nōḍā.
Hindi Translation अद्भुत जैसे पिशाची ने
तीन लोकों में बाधा डाला था।
उस अद्भुत में एक ग्रह
सदा उछल कूद रहा था।
वज्रयोगी खग रंध्र पुरमें
स्वयं गुहेश्वर लिंग देखो।
Translated by: Eswara Sharma M and Govindarao B N
Tamil Translation அற்புதம் என்னும் பிசாசு
மூவுலகையும் பற்றிக் கொண்டது ஐயனே.
அந்த அற்புதத்தினுள்ளே ஒரு கிரகம்
இடைவிடாது மகிழ்ந்தாடியது ஐயனே.
வைரயோகி, ஆயிர இதழ் தாமரையில்
குஹேசுவரனின் இருப்பிடம் காணாய்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅದ್ಭುತ = ಅದರ ಸ್ವರೂಪವು ಹೀಗೆಯೇ ಇದೆ ಎಂದು ಖಚಿತಪಡಿಸಲು ಆಗದು; ಖಗರಂಧ್ರ = ಬ್ರಹ್ಮರಂಧ್ರ, ಆಜ್ಞಾಚಕ್ರದಿಂದ ಸಹಸ್ರಾರಕ್ಕೇರುವ ಸುಷುಮ್ನಾ ಮಾರ್ಗ; ಖಗರಂಧ್ರಪುರ = ಸಹಸ್ರಾರಮಂಡಲ, ಅಲ್ಲಿ ಗುಹೇಶ್ವರಲಿಂಗದ ನೆಲೆ; ಪಿಶಾಚಿ = ಕರುಣೆಯಿಲ್ಲದೆ ಜೀವಿಗಳನ್ನು ಸತಾಯಿಸುವ ಮಾಯೆ; ವಜ್ರಯೋಗಿ = ಅಧೋಮುಖಿಯಾಗಿ ಹರಿವ ಶಕ್ತಿಯನ್ನು ಊರ್ಧ್ವಮುಖಗೊಳಿಸಿ ಮೇಲೇರಿಸುವ ಒಂದು ಯೌಗಿಕಕ್ರಿಯೆ,
ಈ ಯೋಗದಲ್ಲಿ ಪರಿಣತನಾದವನು ವಜ್ರ;
Written by: Sri Siddeswara Swamiji, Vijayapura