Index   ವಚನ - 7    Search  
 
ನಿಂದೆ ಸ್ತುತಿಗಳಿಗೆ ಕಿವುಡನಾಗಿರಬೇಕು. ಪರನಾರಿ ದ್ರವ್ಯಕ್ಕೆ ಅಂಧಕನಾಗಿರಬೇಕು. ಶಬ್ದ ಸಂಭ್ರಮದ ತಾರ್ಕಿಕರೊಡನೆ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು. ಇವನಳಿದ ಶರಣರ ಹೃತ್ಕಮಲದೊಳಗೆ ತಾನು ತಾನಾಗಿಹ ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗನು.