ಆತ್ಮಂಗೆ ಬಂಧ ಮೋಕ್ಷಂಗಳಾವ ತೆರದಿದಂದಲಾಹವೆಂದಡೆ:
ಆಕಾಶಾದಿ ಭೂತಂಗಳೈದು, ಪ್ರಾಣಾದಿ ವಾಯುಗಳೈದು,
ಶ್ರೋತ್ರಾದಿ ಇಂದ್ರಿಯಂಗಳೈದು ಶಬ್ದಾದಿ ವಿಷಯಂಗಳೈದು
ಮನಸಾದಿ ಕರಣ ನಾಲ್ಕು ಇಂತಿವೆಲ್ಲವೂ ಕೂಡಿ ಸ್ಥೂಲತನುವಾಯಿತ್ತು.
ಅದೆಂತೆಂದಡೆ:
ಭೌತಿಪಂಚಭಿಃ ಪ್ರಾಣೈಃ ಚತುರ್ದಶಭಿರಿಂದ್ರಿಯ್ಯೆಃ |
ಚತುರ್ವಿಂಶತಿ ದೇಹಾನಿ ಸಾಂಖ್ಯಶಾಸ್ತ್ರೋ ವಿದೋ ವಿಧುಃ ||
ಎಂದುದಾಗಿ, ಇಂತೀ ಇಪ್ಪತ್ತುನಾಲ್ಕು ತತ್ವದಿಂದಾದುದು ದೇಹವು
ತಾನೆಂಬುದೇ ಅವಿದ್ಯೆ, ಅವಿದ್ಯೆಯೇ ಅಹಂಕಾರ, ಅಹಂಕಾರವೇ ಬಂಧ
ಅದು ಕಾರಣ ದೇಹವು ಆತ್ಮನಲ್ಲ.
ದೇಹವ ವ್ಯತಿರಿಕ್ತವಾಗಿ ಅರಿವುತಿಪ್ಪ ನಾಸ್ತಿಕನೇ ಆತ್ಮ, ಅದೆಂತೆಂದಡೆ:
ಘಟದ್ರಷ್ಟಾ ಘಟದ್ವಿನ್ನಃ ಸರ್ವಥಾನ ಘಟೋಯಥಾ |
ದೇಹದ್ರಷ್ಟಾ ತಥಾದೇಹೋ ನಾಹಮಿತ್ಯವಧಾರಯಃ ||
ಎಂದುದಾಗಿ, ದೇಹವಾತ್ಮನಲ್ಲೆಂಬುದೆ ಅವಿದ್ಯನಾಶ.
ಅವಿದ್ಯನಾಶವೆ ಹಮ್ಮಿನ ಲಯ, ಹಮ್ಮಿನ ಲಯದೆ ಮೋಕ್ಷ.
ಅದೆಂತೆಂದಡೆ:
ಅನಾತ್ಮ ಭೂತದೇಹಾದೌ ಆತ್ಮಬುದ್ದಿಸ್ತುದೇಹಿನಾಂ |
ಸಾವಿದ್ಯಾ ತತ್ಕೃತೊ ಬಂಧಸ್ತನ್ನಾಶೋ ಮೋಕ್ಷಂ ಉಚ್ಯತೇ||
ನಿದ್ರಾದೌ ಜಾಗರಸ್ಯಾಂತಯೋಭಾವ ಉಪಚಾಯತೇ|
ತಂ ಭಾವಂ ಭಾವಯೇದ್ರಾವ ಮುಕ್ತಿರೇವ ನ ಸಂಶಯಃ ||
ಅನಾಖ್ಯೇತು ನಿರಾಲಂಬೇ ಚೌಗ್ರಾಹೇಮ ನ ವರ್ಜಿತೇ ||
ನಿಸ್ತತ್ವೇ ಯೋಜಿತೋ ಮುಕ್ತಃ ಇತಿ ಶಾಸ್ತ್ರೇಷು ನಿಶ್ಚಯಃ ||
ಎಂದುದಾಗಿ, ಬಂಧವ ಹರಿದು ಮುಕ್ತರಾಗಿಪ್ಪ ನಿಜಶರಣರ ಘನವ
ನೀವೇ ಬಲ್ಲಿರಿ ಪರಕಮಗುರುವೆ ನಂಜುಂಡಶಿವಾ.
Art
Manuscript
Music
Courtesy:
Transliteration
Ātmaṅge bandha mōkṣaṅgaḷāva teradidandalāhavendaḍe:
Ākāśādi bhūtaṅgaḷaidu, prāṇādi vāyugaḷaidu,
śrōtrādi indriyaṅgaḷaidu śabdādi viṣayaṅgaḷaidu
manasādi karaṇa nālku intivellavū kūḍi sthūlatanuvāyittu.
Adentendaḍe:
Bhautipan̄cabhiḥ prāṇaiḥ caturdaśabhirindriyyeḥ |
caturvinśati dēhāni sāṅkhyaśāstrō vidō vidhuḥ ||
endudāgi, intī ippattunālku tatvadindādudu dēhavu
tānembudē avidye, avidyeyē ahaṅkāra, ahaṅkāravē bandha
adu kāraṇa dēhavu ātmanalla.
Dēhava vyatiriktavāgi arivutippa nāstikanē ātma, adentendaḍe:
Ghaṭadraṣṭā ghaṭadvinnaḥ sarvathāna ghaṭōyathā |
dēhadraṣṭā tathādēhō nāhamityavadhārayaḥ ||
endudāgi, dēhavātmanallembude avidyanāśa.
Avidyanāśave ham'mina laya, ham'mina layade mōkṣa.
Adentendaḍe:
Anātma bhūtadēhādau ātmabuddistudēhināṁ |
sāvidyā tatkr̥to bandhastannāśō mōkṣaṁ ucyatē||Nidrādau jāgarasyāntayōbhāva upacāyatē|
taṁ bhāvaṁ bhāvayēdrāva muktirēva na sanśayaḥ ||
anākhyētu nirālambē caugrāhēma na varjitē ||
nistatvē yōjitō muktaḥ iti śāstrēṣu niścayaḥ ||
endudāgi, bandhava haridu muktarāgippa nijaśaraṇara ghanava
nīvē balliri parakamaguruve nan̄juṇḍaśivā.