Index   ವಚನ - 1    Search  
 
ಶ್ರೀಗುರುವೇ ನಮೋ ನಮೋ ,ಜಗದ್ಗುರುವೇ ನಮೋ ನಮೋ. ಸಿರಿ ಸಕಲಗುಣ ತ್ಯಾಗಭೋಗಿ ಗುರುವೆ ನಮೋ ನಮೋ. ಹರಿ ಸುರ ಬ್ರಹ್ಮಾದಿಗಳಿಗೆ ಒಡೆಯ ನೀನೆ, ಗುರುವೆ ನಮೋ ನಮೋ. ಪರಮಪ್ರಕಾಶ ಗುರುವೆ ನಮೋ ನಮೋ. ಪರಿತಾರ್ಥಪಾರಾವಾರ ಗುರುವೆ ನಮೋ ನಮೋ. ಸಾರಸುಜನ ಸುಗುಣ ನಿರ್ಗುಣೀ ನಿರಾಭಾರಿ ಗುರುವೆ ನಮೋ ನಮೋ. ಹರಹರ ಶಂಕರಾ ಗುರುವೆ ನಮೋ ನಮೋ. ಗೌರೀವಲ್ಲಭ ಮೃತ್ಯುಂಜಯ ಗುರುವೆ ನಮೋ ನಮೋ. ಪರಮೇಶ್ವರಾಯ ಪುಣ್ಯಾಯ ಗುರುವೆ ನಮೋ ನಮೋ. ಪಾರಮಾರ್ಥ ಪರಮ ಶ್ರೀಗುರು ನಿಜಗುರು ನಿರಾಲಂಬ ಸ್ತೋತ್ರ, ಗುರುವೆ ನಮೋ ನಮೋ. ಗುರುಸ್ಥಲದ ಅಭಿಪ್ರಾಯ ಗುರು ಪ್ರಾಣಿಗಳಿಗೆ ಸಂಬಂಧಾಚರಣೆಯ ವಿವರವು. ನಿಜಗುಣಭರಿತರಾಗಿ ಶಿವಸುಖ ಸಾರಾಯ ವಶ್ಯವಶ್ಯ ಗತವಾಗುವುದಕ್ಕೆ ಪರಮಾನುಬೋಧ ನಿರಾಲಂಬ ಸ್ತೋತ್ರವೆನಿಸುವದು.