Index   ವಚನ - 3    Search  
 
ಗುರುಕರುಣದಿಂದಾದ ಹೆಣ್ಣು ಹೊನ್ನು ಮಣ್ಣು ತ್ರಿವಿಧ ವಸ್ತುಗಳು ಆಧಾರವೆಂಟು. ಅವಸರವಿಲ್ಲದೆ ಕಣ್ಣುಕಟ್ಟಿದ ಪಶುಗಳಂತೆ ಎಣ್ಣೆ ಬಣ್ಣ ಕುಂಕುಮದ ಆದೀಬೀಜಾಕ್ಷರ. ಓಂಕಾರದ ಲೀಲೆಯಾ ಮೂಲಮಂತ್ರಮಂ ಮರೆದು ಸಣ್ಣಾಗಿರ್ಪುದು ಪುಣ್ಯಪಾಪ ವಿಚಾರವಿಲ್ಲದ. ಬಣ್ಣಗೆಟ್ಟು ತಾಪತ್ರಯಾಗ್ನಿಯಲ್ಲಿ ನೊಂದುಬೆಂದು ಇಚ್ಛೆ ಎಚ್ಚರ ಅರಿವು ಎಂಬುವುದಕ್ಕೆ ಗುರುಕರುಣಕಟಾಕ್ಷವಿಲ್ಲದೆ ಮತ್ಸರದಿಂದ ತಿರುತಿರುಗಿ ಆಧಾರಕ್ಕೆ ಆದಿಬೀಜಾಕ್ಷರಮಂ ಭ್ರಮೆಗೊಳ್ಳದೆ ಭಾವನನರಿಯದೆ, ಸಚ್ಚಿದಾತ್ಮಕನು ಹುಚ್ಚುಹುಚ್ಚು ಬೊಗಳುವ ಪರಿ ಇನ್ನೆಂತೊ? ಮುಚ್ಚಿಕೊಂಡಿರುವುದು ಮಾಯೆ. ಬ್ರಹ್ಮವು ತನ್ನಿಚ್ಛಾಮಾತ್ರದಿಂದಾಗುವಂಥ ಪರಿತಾರ್ಥ ನ್ಯಾಯವು ಇನ್ನಾರಿಗೆ? ಹೇಳುವುದಕ್ಕೆ ಅಶುದ್ಧವಾಗಿ ತೋರುವುದಲ್ಲದೆ, ಬೆನ್ನಟ್ಟಿ ಬಾಧಿಸುವುದಲ್ಲದೆ, ಗುರುಕೃಪಾವಸ್ಥೆಯನ್ನು ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಆದಿಬೀಜಾಕ್ಷರ ಮೂಲಮಂತ್ರವೆ ಆಧಾರವೆನಿಸುವುದು ಅಣುವೆ ಮಾತ್ರವೆಂದು ಮಮಕಾಯ ಪ್ರತಿಚ್ಛಯವೆಂದು ಪರಮಾನುಬೋಧವೆಂದು ಕೂಗುವುದಕ್ಕೆ ಪರಮರಾರಾಧ್ಯ ನೀನಲ್ಲ[ವೆ], ನಿಜಗುರು ನಿರಾಲಂಬಪ್ರಭುವೆ.