ವೇದ ದೈವವೆಂದು ನುಡಿವರು,
ಶಾಸ್ತ್ರ ದೈವವೆಂದು ನುಡಿವರು,
ಪುರಾಣ ದೈವವೆಂದು ನುಡಿವರು,
ಕಲ್ಲು ದೈವವೆಂದು ನುಡಿವರು,
ಕಾಷ್ಠ ದೈವವೆಂದು ನುಡಿವರು,
ಪಂಚಲೋಹ ದೈವವೆಂದು ನುಡಿವರು,
ಇವರೆಲ್ಲ ಸಕಲದಲಾದ ಸಂದೇಹವನೆ
ಪೂಜಿಸಿ ಸತ್ತು ಹೋದರಲ್ಲಾ!
ಸಮಸ್ತ ಪ್ರಾಣಿಗಳೂ-ತಾಯನರಿಯದ ತರ್ಕಿಗಳು,
ತಂದೆಯನರಿಯದ ಸಂದೇಹಿಗಳು.
ತನು ಪೃಥ್ವಿಯಿಂದಲಾಯಿತ್ತು,
ಮನ ವಾಯುವಿನಿಂದಲಾಯಿತ್ತು.
ಕಲ್ಲು ಕಾಷ್ಠ ಸಕಲ-ನಿಷ್ಕಲದಿಂದಲಾಯಿತ್ತು.
ವಾಯುವಾಧಾರದ ಪವನಸಂಯೋಗದ
ಅನಾಹತ ಚಕ್ರದಿಂದ ಮೇಲಣ
ಆಜ್ಞಾಚಕ್ರದಲ್ಲಿ ನಿಂದು,
ಅನಂತಕೋಟಿಬ್ರಹ್ಮಾಂಡಗಳ ಮೆಟ್ಟಿ
ಕಾಯದ ಕಣ್ಣ ಮುಚ್ಚಿ,
ಜ್ಞಾನದ ಕಣ್ಣ ತೆರೆದು ನೋಡಲ್ಕೆ,
ಅಲ್ಲಿ ಒಂದು ನಿರಾಕಾರ ಉಂಟು.
ಆ ನಿರಾಕಾರದಲ್ಲಿ ನಿಂದು ನಿರ್ಣಯಿಸಿ ನೋಡಲ್ಕೆ,
ಅಲ್ಲಿ ಒಂದು ನಿಶ್ಶೂನ್ಯವುಂಟು.
ಆ ನಿಶ್ಶೂನ್ಯದಲ್ಲಿ ನಿಂದು ನಿಶ್ಚಯಿಸಿ ನೋಡಲ್ಕೆ,
ಕತ್ತಲೆಯಲ್ಲ ಬೆಳಗಲ್ಲ ಬಚ್ಚಬರಿಯ
ಬಯಲು ಗುಹೇಶ್ವರಾ!
Transliteration Vēda daivavendu nuḍivaru,
śāstra daivavendu nuḍivaru,
purāṇa daivavendu nuḍivaru,
kallu daivavendu nuḍivaru,
kāṣṭha daivavendu nuḍivaru,
pan̄calōha daivavendu nuḍivaru,
ivarella sakaladalāda sandēhavane
pūjisi sattu hōdarallā!Samasta prāṇigaḷū-tāyanariyada tarkigaḷu,
tandeyanariyada sandēhigaḷu.
Tanu pr̥thviyindalāyittu,
mana vāyuvinindalāyittu.
Kallu kāṣṭha sakala-niṣkaladindalāyittu.
Vāyuvādhārada pavanasanyōgada
anāhata cakradinda mēlaṇa
ājñācakradalli nindu,
Anantakōṭibrahmāṇḍagaḷa meṭṭi
kāyada kaṇṇa mucci,
jñānada kaṇṇa teredu nōḍalke,
alli ondu nirākāra uṇṭu.
Ā nirākāradalli nindu nirṇayisi nōḍalke,
alli ondu niśśūn'yavuṇṭu.
Ā niśśūn'yadalli nindu niścayisi nōḍalke,
kattaleyalla beḷagalla baccabariya
bayalu guhēśvarā!
Hindi Translation वेद दैव कहें बोलते, शास्त्र दैव कहें बोलते,
पूराण दैव कहें बोलते, पाषाण दैव कहें बोलते,
काष्ट दैव कहें बोलते, पंचलोह दैव कहें बोलते,
ये सब सकल में हुए, संदेह ही पूजाकर मर गये न।
समस्त प्राणी – माता न जाने तार्किक,
पिता न जाने संदेही।
तन पृथ्वी से हुआ था, मनवायु से हुआ था,
पाषाण, काष्ट सकल-निष्कल से हुऐ थे।
वायु आधार के पवन संयोग के अनाहत चक्र से ऊपर की,
आज्ञाचक्र में खेड़,: अनंत कोटि ब्रह्मांड को दबाकर
शरीर की आँख मूंदकर, ज्ञान की आँख खोल देखे तो,
वहाँ एक निराकार है।
उस निराकार में खड़े निर्णय कर देखे तो,
वहाँ एक निश्यून्य है।
उस निश्यून्य में खडे निश्चय कर देखें तो
न अंधकार, न प्रकाश, खोखला शून्य गुहेश्वरा।
Translated by: Eswara Sharma M and Govindarao B N