ಶಂಕಿನಿ ನಾಡಿಯ ಸಪುರನಾಳದೊಳಗಣ
ಸಣ್ಣ ಬಣ್ಣದ ಹೊಲಬ ಅಣ್ಣಗಳೆತ್ತ ಬಲ್ಲರು?
ಲಿಂಗದ ಹಂಗಿನ ಪ್ರಾಣ,
ಪ್ರಾಣದ ಹಂಗಿನ ದೇಹ,
ದೇಹದ ಹಂಗಿನ ಲಿಂಗವ,
ಲಿಂಗವೆಂದು ಪೂಜಿಸಲು,
ಆಳಿನಾಳಿನ ಕೀಳಾಳು ಪಟ್ಟಕ್ಕೆ ಸಲುವನೆ?
ಗುಹೇಶ್ವರನೆಂಬ ಸಹಜದ ನಿಲವು
ಸಂತೆಯ ಪಸರಕ್ಕೆ ಬಂದಡೆ ನಾಚಿತ್ತೆನ್ನ ಮನವು!
Transliteration Śaṅkini nāḍiya sapuranāḷadoḷagaṇa
saṇṇa baṇṇada holaba aṇṇagaḷetta ballaru?
Liṅgada haṅgina prāṇa,
prāṇada haṅgina dēha,
dēhada haṅgina liṅgava,
liṅgavendu pūjisalu,
āḷināḷina kīḷāḷu paṭṭakke saluvane?
Guhēśvaranemba sahajada nilavu
santeya pasarakke bandaḍe nācittenna manavu!
Hindi Translation शंकिनी नाडि के सपुर नाल में
छोटे रंग की रीति भाई कैसे जानते?
लिंग की परवाह का प्राण, प्राण की परवाह का देह,
देह की परवाह का लिंग, लिंग कहे पूजा करने से:-
सेवकों के सेवक का छोटा सेवक अधिकार का योग्य है?
गुहेश्वर कहते सहज स्थिति
बाजार की दूकान में आने से लजा था मेरा मन।
Translated by: Eswara Sharma M and Govindarao B N