Index   ವಚನ - 4    Search  
 
ಕೊರಡು ಕೊನರುವಲ್ಲಿ, ಬರಡು ಕರೆವಲ್ಲಿ, ಕಲ್ಲಿನ ಶಿಲೆಯೊಡೆದು ರೂಪುದೋರುವಲ್ಲಿ, ಬಳ್ಳವಲ್ಲಾಡದೆ ಲಿಂಗವಾಹಲ್ಲಿ, ಇಂತವರಲ್ಲಿಯ ಗುಣವೊ? ಇಂತಿವೆಲ್ಲವನರಿವ ಕಲ್ಲೆದೆಯವನ ಗುಣವೊ? ಇಂತಿವ ಬಲ್ಲಡೆ ವಿಶ್ವಾಸದಲ್ಲಿಯೆ ವೀರಬೀರೇಶ್ವರಲಿಂಗವು ತಾನಾಗಿಪ್ಪ.