ಹೋತು ಹುಸಿ, ಆಡು ಬಹುಮಾತಿನ ನೀತಿ,
ಕುರಿ ಸಕಲೇಂದ್ರಿಯದ ನೆಲ ಹೊಲ,
ತಗರು ತಥ್ಯಮಿಥ್ಯದ ಹೋರಟೆ,
ಹುಲಿ ದ್ವೇಷದಾಗರ, ತೋಳ ಕೊಂದು ತಿಂಬ ಕಾಟ.
ಚೋರ ಮೃತ್ಯು ಇಂತಿವು ಮೊದಲಾದ
ಬಹುವಿಧದ ಪ್ರಕೃತಿಗಳಲ್ಲಿ ಕಾಯದ ನೆಲಹೊಲನಲ್ಲಿ,
ಸಕಲೇಂದ್ರಿಯವೆಂಬ ಹಿಂಡು ಮಂದೆಯಾಗಿವೇಕೊ?
ಇದರ ಸಂಗವ ಬಿಡಿಸು, ನಿಮ್ಮ ನಿಜದಂಗವ ತೋರಿ,
ಭವಪಾಶದಂಗವ ಹರಿದು, ನಿಮ್ಮ ಘನಲಿಂಗದಲ್ಲಿರಿಸು,
ನೆರೆ ವೀರಬೀರೇಶ್ವರಾ.
Art
Manuscript
Music
Courtesy:
Transliteration
Hōtu husi, āḍu bahumātina nīti,
kuri sakalēndriyada nela hola,
tagaru tathyamithyada hōraṭe,
huli dvēṣadāgara, tōḷa kondu timba kāṭa.
Cōra mr̥tyu intivu modalāda
bahuvidhada prakr̥tigaḷalli kāyada nelaholanalli,
sakalēndriyavemba hiṇḍu mandeyāgivēko?
Idara saṅgava biḍisu, nim'ma nijadaṅgava tōri,
bhavapāśadaṅgava haridu, nim'ma ghanaliṅgadallirisu,
nere vīrabīrēśvarā.