`ಮಂತ್ರ ಯಂತ್ರಕ್ರಿಯಾಮುದ್ರಾನ್ಯಾಸಾಶ್ಚಾಹ್ವಾನಕಾದಿಭಿಃ| ಉಪಚಾರೈ
ರ್ಬಹುವಿಧೈರ್ಲಿಂಗಸಿಂಹಾಸನೇ ಯಜೇತ್||' ಎಂದು ಶಿವಾದಿ ಮಂತ್ರಂ ಗಳಿಂದಲೂ
ಆಯಾಯ ಮಂತ್ರಂಗಳ ಯಂತ್ರ ಕ್ರಿಯೆಗಳಿಂದಲೂ ಮಹಾ ಮುದ್ರೆ ಮೊದಲಾದ
ಮುದ್ರೆಗಳಿಂದಲೂ ನ್ಯಾಸಂಗಳಿಂದಲೂ ಬಳಿಕ `ಓಂ ಬ್ರಹ್ಮ ಸರ್ವಜ್ಞಶಕ್ತಿಧಾಮ್ನೇ
ಹೃದಯಾ ನಮಃ `ಓಂ ಹ್ರೀಃ ತೃಪ್ತಿಶಕ್ತಿಧಾಮ್ನೇ ಶಿರಸೇ ಸ್ವಾಹಾ ಓಂ ಹ್ರೂಂ ಅನಾದಿ
ಬೋಧಶಕ್ತಿಧಾಮ್ನೇ ಶಿಖಾಯೈವಷಟ್ ಓಂ ಹ್ರೈ ಸ್ವತಂತ್ರಶಕ್ತಿಧಾಮ್ನೇ
ಕವಚಾಯಹಿಂ| ಓಂ ಹ್ರೌಂ ಅಲುಪ್ತಶಕ್ತಿ ಧಾಮ್ನೇ ನೇತ್ರತ್ರಯಾಯವೌ ಷಟ್||
ಓಂ ಹ್ರಃ ಅನಂತಶಕ್ತಿಧಾಮ್ನೇ ಅಸ್ತ್ರಾಯ ಷಟ್' ಎಂದು ಷಡಂಗನ್ಯಾಸಂಗೆಯ್ದು,
ಬಳಿಕ ಓಂ ಹ್ರೀಂ ಈಶಾನಾಯನಮಃ' ಎಂದು ಶಿರಸ್ಸಿನಲ್ಲಿ, ಓಂ ಹ್ರೀಂ
ತತ್ಪುರುಷಾಯನಮಃ ಎಂದು ಮುಖದಲ್ಲಿ ಓಂ ಹೃಂ ಅಘೋರಾಯನಮಃ ಎಂದು
ಹೃದಯದಲ್ಲಿ `ಓಂ ಹ್ರೀಂ ವಾಮ ದೇವಾಯನಮಃ' ಎಂದು ಗುಹ್ಯದಲ್ಲಿ, `ಓಂ
ಹ್ರಂ ಸದ್ಯೋಜಾತಾಯನಮಃ' ಎಂದು ಪಾದಂಗಳಲ್ಲಿ ಪಂಚಬ್ರಹ್ಮನ್ಯಾಸಂಗಳಂ
ಮಾಡಿ, ಆಹ್ವಾನ ಸ್ಥಾಪನ ಸನ್ನಿರೋಧನ ಮೊದಲಾದವರಿಂದವೂ ಷೋಡಷೋಪಚಾರ
ಮೊದಲಾದ ಉಪಚಾರಂಗಳಿಂದಲೂ, ಲಿಂಗವನು ಸಿಂಹಾಸನದಲ್ಲಿ ಪೂಜಿಸೂದು.
`ಆತ್ಮಾರ್ಥಂ ಚ ಪರಾರ್ಥಂ ಚ ಪೂಜಾದ್ವಿವಿಧಮುಚ್ಯತೇ' ಎಂದು ಈ ಕ್ರಮದಿಂದ
ಮಾಡಲ್ಪಟ್ಟ ಶಿವಲಿಂಗಪೂಜೆ ಆತ್ಮಾರ್ಥಪೂಜೆ ಎಂದು, ಪರಾರ್ಥ ಪೂಜೆ ಎಂದು ಎರಡು
ಪ್ರಕಾರವಾಗಿ ಹೇಳಲ್ಪಟ್ಟುದಯ್ಯ ಶಾಂತವೀರೇಶ್ವರಾ.