Index   ವಚನ - 51    Search  
 
`ವೀರಮಾಹೇಶ್ವರ ತಂತ್ರಂ ಜ್ಞಾತವ್ಯಂ ತ್ರಿವಿಧಂ ಸುತ| ಸಾಮಾನ್ಯಂ ಚ ವಿಶೇಷಂ ಚ ನಿರಾಭಾರಂ ಕ್ರಮಾದ್ಭವೇತ್' ಎಂದು ಎಲೆ ಕುಮಾರ, ವೀರಮಾಹೇಶ್ವರಾಗಮವು ಮೂರು ವಿಧವಾದುದೆಂದು ಅರಿಯಬೇಕಾದುದು: ಸಾಮಾನ್ಯ ವೀರಶೈವ, ವಿಶೇಷ ವೀರಶೈವ, ನಿರಾಭಾರ ವೀರಶೈವವೆಂದು ಹೀಂಗೆ ಕ್ರಮದಿಂದ ಮೂರು ಪ್ರಕಾರಮಪ್ಪುದು ಶಾಂತವೀರೇಶ್ವರಾ.