ಸಂಗದಿಂದಾಯಿತ್ತು ತನು,
ಆ ತನುವಿಂದಾಯಿತ್ತು ಮರವೆ,
ಆ ಮರವೆಯಿಂದಾಯಿತ್ತು ನೋಡಾ
'ನೀ' 'ನಾ' ಎಂಬುದು.
ನೀನೆಂಬ ಬಹಿರಂಗವಂತಿರಲಿ
ನಾನೆಂಬ ಅಂತರಂಗವಂತಿರಲಿ-
ಈ ಉಭಯ ಭಾವವಲ್ಲದೆ,
ನಿನ್ನಿಂದ ನಿನ್ನನರಿದಹೆನೆಂಬುದು ವಿಪರೀತಭಾವ!
ಈ ಅರಿವು ಮರವೆಯಾಟದ ಭ್ರಾಂತು ಬಿಡದು.
ಗುಹೇಶ್ವರಲಿಂಗವು ನಿನ್ನಲ್ಲಿ ನಿಂದ ಪರಿ
ಎಂತು ಹೇಳಾ ಸಂಗನಬಸವಣ್ಣಾ.
Transliteration Saṅgadindāyittu tanu,
ā tanuvindāyittu marave,
ā maraveyindāyittu nōḍā
'nī' 'nā' embudu.
Nīnemba bahiraṅgavantirali
nānemba antaraṅgavantirali-
ī ubhaya bhāvavallade,
ninninda ninnanaridahenembudu viparītabhāva!
Ī arivu maraveyāṭada bhrāntu biḍadu.
Guhēśvaraliṅgavu ninnalli ninda pari
entu hēḷā saṅganabasavaṇṇā.
Hindi Translation संग से हुआ था तनु, उस तनु से आई थी भूल ,
उस भूल से हुआ था देख ‘तू’‘मैं’ कहना,
तू कहना बहिरंग ऐसे रहे, मैं कहनाअंतरंग वैसे रहे,
इन उभय भाव बिना,
तुझसे तुझे जान लिया कहना विपरीत भाव।
यह ज्ञान भूल के खेल की भ्रम मनत छूटती।
गुहेश्वरलिंग तुझमें खडी रीति कैसे बताओं संगनबसवण्णा?
Translated by: Eswara Sharma M and Govindarao B N