ಬಳಿಕ ನಿಷ್ಕಾಮನಾದ ಮೋಕ್ಷಾಧಿಕಾರಿಗಭ್ಯಂತರದಲ್ಲಿ ಮುಖ್ಯಮಾಗಿ ಜ್ಞಾನ
ಮಯನಾದ ಪೂಜೆ ಕತ್ರ್ಯವ್ಯಮಾ ಪೂಜೋಪಚಾರಂಗಳಲ್ಲಿ ಉಪಚಾರಮಂ
ಉಪಚಾರ್ಯಮಾದ ದೇವತೆಯ ಗುಣಂಗಳನಾರೋಪಿಸಿ ಮಾಡಲು ತಕ್ಕು
ದದೆಂತೆಂದೊಡೆ: ಮೊದಲು ತದನಂತರದಲ್ಲಿ ಶಿವಧರ್ಮವೆ ಕಂದ, ಸುಜ್ಞಾನವೆ
ನಾಳ, ಅಷ್ಟಮಹ ದೈಶ್ವರ್ಯವೆ ದಳ, ರುದ್ರೇಶ್ವರಾದಿಕವೆ ಕೇಸರ, ವೈರಾಗ್ಯವೆ
ಕರ್ಣಿಕೆಗಳಾಗಿ ಚಂದ್ರಪ್ರಭಾಮಯವೆನಿಸಿ ಮೆರೆವ ಹೃದಯಕಮಲದ ಸೋಮ
ಸೂರ್ಯಾಗ್ನಿ ಮಂಡಲತ್ರಯದ ಮಧ್ಯದಲ್ಲಿ ಸತ್ತೆಂಬ ದಿವ್ಯಮೂರ್ತಿಯಿಂ, ಚಿತ್ತೆಂಬ
ಕಾಯ ಕಾಂತಿಯಿಂ, ಆನಂದವೆಂಬ ಲಾವಣ್ಯದಿಂ, ತತ್ವ ಪರಿಕಲ್ಪಿತಮಾ
ಪರಿಕಲ್ಪಿತಮಾ ದಾಭರಣಾಯುಧಾದಿಗಳಿಂದಲಂಕೃತಮಾಗಿ, ಸ್ಫಟಿಕದೊಳಗಣ
ದೀಪದಂತೆ ಒಳಹೊರಗೆ ಬೆಳಗುತ್ತಿರ್ದೀಶ್ವರನಂ ಪರಿಭಾವಿಸಿ ಬಳಿಕ ಸರ್ವಾಧಾರ
ನೀಶ್ವರನೆಂಬ ಬುದ್ಧಿಯೆ ಆಸನ, ಪರಮಾತ್ಮನು ಪರಿಪೂರ್ಣನೆಂಬ ಮತಿ[ಯೆ]
ಆವಾಹನ, ಜಗಕೆಲ್ಲಂ ಶಿವನ ಶ್ರೀಪಾದವೆಂಬ ತಿಳಿವೆ ಪಾದ್ಯಂ, ಸುಖಾಂಬುಧಿ
ಶಂಭುವೆಂಬನುಸಂಧಾನವೆ ಅರ್ಘ್ಯ, ಪರಮಪವಿತ್ರ ಸ್ವರೂಪನಭವನೆಂಬರಿವೆ
ಆಚಮನೀಯ, ನಿತ್ಯನಿರ್ಮಳ ನೀಶ್ವರನೆಂಬುಪಲಬ್ದಿಯೆ ಸ್ನಾನ, ಜಗವೆಲ್ಲವನತಿ
ಕ್ರಮಿಸಿರ್ಪ ಶುದ್ಧವಿದ್ಯೆಯ ವಸ್ತ್ರ, ತ್ರಿಗುಣಾಗಮಾತೀತಮಾದ ಜ್ಞಾನವೆ ಯಜ್ಞ
ಸೂತ್ರ, ಚೈತನ್ಯವೆ ಜಗದಲಂಕಾರಮೆಂಬ ಪ್ರತಿಭೆಯ ಆಭರಣ, ಶುದ್ಧಚಿಚ್ಛಕ್ತಿಯೆ
ಅನುಲೇಪನ, ಕಾರುಣ್ಯವೆ ಅಕ್ಷತೆ, ಪ್ರಣವಾತ್ಮಕ ಸತ್ಯವಚನವೆ ಪುಷ್ಪ, ವಿಷಯ
ವಾಸನಾವಿಲಯವೆ ಧೂಪ, ಜಗದ್ವರ್ತಿ ವಿಡಿದುಜ್ವಲಿಪ ಪರಂಜ್ಯೋತಿಯೆ
ದೀಪ, ಜಗವೆಲ್ಲಮಂ ಕಬಳೀಕರಿಸಿಕೊಂಡಿಪ್ಪಾತ್ಮನೆ ನಿತ್ಯತೃಪ್ತನೆಂಬ ಸಂವಿತ್ತೇ
ನೈವೇದ್ಯ, ತ್ರಿಗುಣಂಗಳನೊಳಕೊಂಡು ನಿಂದ ಜ್ಞಪ್ತಿಯೆ ತಾಂಬೂ, ಸೋಹಂ
ಭಾವದಾವೃತ್ತಿಯೆ ಪ್ರದಕ್ಷಿಣ, ಸಮಸ್ತ ತ್ತ್ವಂಗಳನತಿಕ್ರಮಿಸಿನಿಂದ ನಿಜವೆ
ನಮಸ್ಕಾರ, ಶಿವೈಕ್ಯಸ್ಥಿತಿಯೆ ವಿಸರ್ಜನವೆಂಬ ಉಪಚಾರಂಗಳಿಂದಂತಃಪೂಜೆಯಂ
ರಚಿಸೆಂದೊರೆದಿರಯ್ಯಾ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Baḷika niṣkāmanāda mōkṣādhikārigabhyantaradalli mukhyamāgi jñāna
mayanāda pūje katryavyamā pūjōpacāraṅgaḷalli upacāramaṁ
upacāryamāda dēvateya guṇaṅgaḷanārōpisi māḍalu takku
dadentendoḍe: Modalu tadanantaradalli śivadharmave kanda, sujñānave
nāḷa, aṣṭamaha daiśvaryave daḷa, rudrēśvarādikave kēsara, vairāgyave
karṇikegaḷāgi candraprabhāmayavenisi mereva hr̥dayakamalada sōma
sūryāgni maṇḍalatrayada madhyadalli sattemba divyamūrtiyiṁ, cittemba
Kāya kāntiyiṁ, ānandavemba lāvaṇyadiṁ, tatva parikalpitamā
parikalpitamā dābharaṇāyudhādigaḷindalaṅkr̥tamāgi, sphaṭikadoḷagaṇa
dīpadante oḷahorage beḷaguttirdīśvaranaṁ paribhāvisi baḷika sarvādhāra
nīśvaranemba bud'dhiye āsana, paramātmanu paripūrṇanemba mati[ye]
āvāhana, jagakellaṁ śivana śrīpādavemba tiḷive pādyaṁ, sukhāmbudhi
śambhuvembanusandhānave arghya, paramapavitra svarūpanabhavanembarive
ācamanīya, nityanirmaḷa nīśvaranembupalabdiye snāna, jagavellavanati
kramisirpa śud'dhavidyeya vastra, triguṇāgamātītamāda jñānave yajña
Sūtra, caitan'yave jagadalaṅkāramemba pratibheya ābharaṇa, śud'dhacicchaktiye
anulēpana, kāruṇyave akṣate, praṇavātmaka satyavacanave puṣpa, viṣaya
vāsanāvilayave dhūpa, jagadvarti viḍidujvalipa paran̄jyōtiye
dīpa, jagavellamaṁ kabaḷīkarisikoṇḍippātmane nityatr̥ptanemba sanvittē
naivēdya, triguṇaṅgaḷanoḷakoṇḍu ninda jñaptiye tāmbū, sōhaṁ
bhāvadāvr̥ttiye pradakṣiṇa, samasta ttvaṅgaḷanatikramisininda nijave
namaskāra, śivaikyasthitiye visarjanavemba upacāraṅgaḷindantaḥpūjeyaṁ
racisendoredirayyā śāntavīrēśvarā.