Index   ವಚನ - 84    Search  
 
ಜಾತಿಸೂತಕ ಜನನಸೂತಕ ಪ್ರೇತಸೂತಕ ಉಚ್ಛಿಷ್ಟಸೂತಕ ರಜಃಸೂತಕ ವೆಂಬ ವೆಂಬ ಪಂಚಸೂತಕವನತಿಗಳೆದಾತನಾಗಿ, ಲಿಂಗಾಚಾರ ಸದಾಚಾರ ಭಕ್ತ್ಯಾಚಾರ ಶಿವಾಚಾರ ಗಣಾಚಾರವೆಂಬ ಪಂಚಾಚಾರನಿಷ್ಠನಾಗಿ ದಾಸತ್ವ ವೀರದಾಸತ್ವ ಭೃತ್ಯತ್ವ ವೀರಭೃತ್ಯ[ತ್ವ] ಸಮಯಾಚಾರತ್ವ ಸಕಲಾವಸ್ಥಾತ್ವಂಗಳೆಂಬ ಷಡ್ವಿಧ ಸಜ್ಜನತ್ವಯುಕ್ತನಾಗಿ, ದೇಶಕಾಲ ಕಲ್ಪಿತಾದಿ ಲೌಕಿಕಾಚಾರಂಗಳಂ ವಿೂರಿ ಸ್ವತಂತ್ರ ಶೀಲನಾಗಿ, ಶಿವಾತ್ಮರ್ಗೆ ಭೇದಭ್ರಾಂತಿದೋರದಾತನಾಗಿ, ಉಪನಿಷ ದ್ವಾಕ್ಯ ಜನಿತವಿದ್ಯೆಯಲ್ಲಿ ರಮಿಸುವ ಶೈವನಪ್ಪುದರಿಂ ತತ್ಸಂಜ್ಞೆಯುಳ್ಳಾತನಾಗಿ, ಜಗತ್ಪೂಜ್ಯನಾಗಿಪ್ಪಾತನೆ ವೀರಶೈವನಪ್ಪನಯ್ಯಾ ಶಾಂತವೀರೇಶ್ವರಾ.