Index   ವಚನ - 86    Search  
 
ಅನಂತರದಲ್ಲಿ ದಾಂತ್ಯಾದಿ ಸಾಧನಸಂಪನ್ನಾಗಿ, ಶ್ರೀಗುರುವಿಂ ಶಾಸನೀಯ ನಪ್ಪುದರಿಂ ಶಿಷ್ಯನಾದಾತ್ಮನು ಶುಭಕಾಲದೇಶಾದಿಗಳಂ ಪರೀಕ್ಷಿಸಿ ಬಳಿಕಾ ಚಾರ್ಯ ಸಂಪ್ರದಾಯಸಿದ್ಧನಾದ ಸಕಲಸದ್ಗುಣಸಹಿತನಾದ ಶ್ರೀಗುರುವನೆಯ್ದಿ, ಮತ್ತಮಾ ಗುರುವಿನನುಮತದಿಂ ಶಿವಪೂಜಾ ಪಾರಾಯಣರಾದ ಕೀರ್ತಿಮಯ ರಾದ ನಾಲ್ವರು ಋತ್ವಿಕ್ಕುಗಳಂ ಸ್ನಾನಧವಲಾಂಬರ ಆಭರಣ ಪುಷ್ಪಾದಿ ಗಳಿಂದಲಂಕರಿಸಿ, ಬಳಿಕಾ ಶ್ರೀಗುರುವಿನಾಜ್ಞೆಯಿಂ ತಾನಾರಾತ್ರೆಯಲ್ಲಿ, ಕ್ಷೀರಾಹಾರಿಯಾಗಿರ್ದು, ಮೇಲೆ ಪ್ರಭಾತಸಮಯದಲ್ಲಿ ದಂತಧಾವನಂಗೆಯ್ದು, ಮಂಗಲಸ್ನಾನಂ ಮಾಡಿ ಧವಲಾಂಬರವನುಟ್ಟು ಪೊದೆದು, ಭಸಿತೋದ್ಧೂಳನಂ ರಚಿಸಿ, ತ್ರಿಪುಂಡ್ರ ಧಾರಣಮಂ ವಿಸ್ತರಿಸಿ, ರುದ್ರಾಕ್ಷಮಾಲೆಗಳಂ ಧರಿಸಿ, ಸುವರ್ಣಾಭರಣಾದಿಗಳಿಂ ಸಿಂಗರಂಬಡೆದು, ಬಳಿಕಾಚಾರ್ಯನ ಸವಿೂಪಕ್ಕೆ ಬಂದು, ಭಯಭಕ್ತಿಯಿಂದಷ್ಟಮಂತ್ರಪೂರ್ವಕದಿಂ ವಿನಯವಿನಮಿತನಾಗಿ ಸುವರ್ಣ ಪುಷ್ಪಾದಿಗಳಿಂ ವಿತ್ತಾನುಸಾರಮಾಗಿ ಗುರುಪೂಜನಂಗೆಯ್ದು ಮರಳಿ ಗಂಧ ಪುಷ್ಪಾದಿಗಳಿಂ ಋತ್ವಿಕ್ಕುಗಳಂ ಭಜಿಸಿ, ಮೇಲೆ ಶ್ರೀಗುರು ಮುಖ್ಯಸಕಲಮಾಹೇಶ್ವರರಂ ವಂದಿಸಿ ವಿಭೂತಿ ವೀಳೆಯಂಗಳಂ ಸಮರ್ಪಿಸಿ, ಬಳಿಕ ಖನನ ದಹನ ಶೋಧನ ಸಂಪ್ರೋಕ್ಷಣ ಮರ್ದನ ಲೇಪನವೆಂಬ ಷಟ್ಕಮರ್ಂಗಳಿಂ ಸಾರಣೆ ಕಾರಣೆ ತಳಿರತೋರಣ ಕುಸುಮತೋರಣ ಸರವಿಸರ ಪಳವಳಿಗೆ ಧೂಪ ಧೂಮ್ನಾದಿಗಳಿಂ ಪರಿಶೋಭೆವಡೆದು, ಮನೋಹರಮಾದ ದೀಕ್ಷಾಮಂಟಪದಲ್ಲಿ ಗೋಚರ್ಮ ಮಾತೃಭೂಮಿಯಂ ಚೌಕಮಾಗಿ, ಗೋರೋಜನ ಗೋಮಯ ಗೋಮೂತ್ರ ಗೋದಧಿಘೃತ ಗೋಕ್ಷೀರಯೆಂಬ ಷಟ್ಸಮ್ಮಾರ್ಜನಂಗೆಯ್ದು, ಬಳಿಕಾ ಚೌಕಮಧ್ಯದಲ್ಲಿ ಪ್ರವಾಳ ಮೌಕ್ತಿಕ ಶುಭ್ರ ಪಾಷಾಣ ಸುವ್ಯರ್ಣ ಪಾಷಾಣ ಸುವ್ಯರ್ಣ ಶ್ವೇತಾಭ್ರಕ ತಂಡುಲಾದಿಗಳ ಚೂರ್ಣಂಗಳಿಂದ ಮತ್ತದರಾಷ್ಟದಳಕಮಲಮಂ ರಚಿಸಿ, ಮತ್ತದರಾ ವಿವರ: ಶಂಖ ಚಕ್ರ ಶೂಲ ಡಮರುಗ ಪರಶು ಘಂಟೆ ಛತ್ರ ಚಾಮರಮೃಷಭ ಚರಣಾದಿ ವಿಚಿತ್ರವರ್ಣಕಮಂ ತುಂಬುತ್ತದರ ಮೇಲೆ ಎಳ್ಳು ಜೀರಿಗೆ ಗೋದುವೆ ಅಕ್ಕಿ ಉದ್ದುಗಳೆಂಬ ಪಂಚಧಾನ್ಯವನಾದರೂ ಕೇವಲ ತಂಡುಲವನಾದರೂ ಮೂವತ್ತೆರಡಂಗುಲ ಪ್ರಮಾಣಿನ ಚತುರಸ್ರಮಾಗಿ ಹರಹುತ್ತದರ ಮೇಲೆ ತೀರ್ಥಾಂಬುಪೂರ್ಣ ಮಾದ ಸುವರ್ಣಾದಿ ನವೀನ ಪಂಚಕಳಶಂಗಳಂ ಪೂರ್ವದಕ್ಷಿಣ ಪಶ್ಚಿಮ ಉತ್ತರ ಮಧ್ಯ ಕ್ರಮದಿಂದಾಚಾರ್ಯನೆ ಸ್ಥಾಪಿಸುತ್ತಾ, ಕಳಶಂಗಳಂ ಬೇರೆ ಬೇರೆ ನೂತನ ವಸ್ತ್ರಂಗಳಿಂ ಸುತ್ತಿ, ನವಪಂಚತಂತುಗಳಿಂ ಪರಿವೇಷ್ಟಿಸಿ ಸುವರ್ಣಾದಿನಗಳನವ ರೊಳಿರಿಸಿ, ಬಳಿಕ್ಕಾಮ್ರಪಲ್ಲವ ದೂರ್ವಾಂಕುರ ಪೂಗ ಕುಸುಮ ನಾಗವಳಿ... (ಇಲ್ಲಿ ಒಂದು ಗರಿ ಕಳೆದುಹೋಗಿದೆ).