ವಚನ - 1536     
 
ಸಂಸಾರವ ಬಿಟ್ಟೆನೆಂದು, ನಿರಾಶಾಪದವ ಮಾಡಿ, ತಲೆಯ ಬೋಳಿಸಿಕೊಂಡು, ಕುದಿದು ಕೋಟಲೆಗೊಂಡು, ಮನೆ ಮನೆ ತಪ್ಪದೆ ಭಿಕ್ಷವ ಬೇಡಿ, ಉಂಡು, ಎದ್ದು ಹೋಗಿ ತತ್ತ್ವವ ಬೋಧಿಸಿ, ಉದರವ ಹೊರೆವಂದು ಮುನ್ನವಿಲ್ಲ ಮರುಳಾ? ಕಾಡಿ ಬೇಡಿ ಹಾಡಿ ಒಡಲ ಹೊರೆವಂಗೆ, ಮುಕ್ತಿಯುಂಟೆ ಮರುಳಾ? ಜಂಗಮದಂಗವು ನಿರ್ಗಮನಿ, ಭಕ್ತಪ್ರಿಯ ನಮ್ಮ ಗುಹೇಶ್ವರಲಿಂಗದಲ್ಲಿ ಜಂಗಮದ ನಡೆಯಿಲ್ಲ ಕಾಣಾ, ಎಲೆ ಮರುಳಾ.