Index   ವಚನ - 2    Search  
 
ವಂದಿಸುವವರ ಕಂಡಡೆ ಉಪಚಾರವ ಮಾಡಿ, ನಿಂದಿಸುವವರ ಕಂಡಡೆ ಕಸವ ಮಾಡಿ, ತನಗೆ ಭಕ್ತಿಯ ಮಾಡಿದವರೆ ಭಕ್ತರೆಂದು, ತನಗೆ ಮಾಡದವರೆ ಅಜ್ಞಾನಿಗಳೆಂಬುವರು. ತಾವು ಜ್ಞಾನವರತು, ಉಪಾಯದಲ್ಲಿ ವೇಷವ ಹೊತ್ತು, ದೋಷವ ಮಾಡಿ, ನಾನೀಶನೆಂಬ ಘಾತಕರ ಕಂಡು, ಬಾಚಿಯ ಕಾಯಕವ ಮಾಡೆ, ಶ್ರೀಗುರು ಪ್ರಭುನ್ಮುನೀಶ್ವರಾ.