Index   ವಚನ - 13    Search  
 
ಅಷ್ಠಮದಂಗಳೆಂಬ ಆನೆಯ ಮೆಟ್ಟಿ ಅವಿನಾಶವೆಂಬ ಕಂತೆಯ ತೊಟ್ಟು, ಅನಾಹತವೆಂಬ ಕರ್ಪರವಂ ಕೊಂಡು, ಅಕಾಯಕಲ್ಪಿತವೆಂಬ ಯೋಗದಂಡಮಂ ಪಿಡಿದು, ಕಾಯಕಲ್ಪಿತ ಜೀವನೋಪಾಯವನತಿಗಳೆದು, ಮಾಯಾಪ್ರಪಂಚು ನಾಸ್ತಿಯಾಗಿ, ಶಿವಧ್ಯಾನ ಕಾರಣ ಸದಾಚಾರವೆಡೆಗೊಂಡು, ಸಮ್ಯಜ್ಞಾನವೆಂಬ ಶಿವಪುರಮಂ ಪೊಕ್ಕು, ಸಮತೆಯೆಂಬ ಓಗರವನೆತ್ತುತ್ತ, ಅಜ್ಞಾನವೆಂಬ ನಾಯ ಹೊಡೆಹುತ್ತ, ಉಪಪಾತಕಕೋಟಿನಾಂ ಬ್ರಹ್ಮಹತ್ಯಶತಾನಿ ಚ| ದಹಂತಿ ಶೇಷಪಾಪಾನಿ ಶಿವಭಕ್ತಸ್ಯ ದರ್ಶನಾತ್ || ಎಂದುದಾಗಿ, ಸಕಲಜೀವಂಗಳ ಕರ್ಮಕ್ಷಯವ ಮಾಡಲೆಂದು ಸುಳಿವನಯ್ಯ. ಮಹಂತ ಸಕಳೇಶ್ವರದೇವಾ, ನಿಮ್ಮ ಶರಣ.