Index   ವಚನ - 23    Search  
 
ಉಡಲು ಸೀರೆಯ ಕಾಣದೆ ಬತ್ತಲೆಯಿಪ್ಪರಯ್ಯಾ. ಉಣಲಶನವ ಕಾಣದೆ ಹಸಿದಿಪ್ಪರಯ್ಯಾ. ಮೀಯಲೆಣ್ಣೆಯ ಕಾಣದೆ ಮಂಡೆಯ ಬೋಳುಮಾಡಿಕೊಂಡಿಪ್ಪರಯ್ಯಾ. ದಿಟದಿಂ ಬಿಡಿಸಬಾರದಂತೆ, ಈ ಸಟೆಯ ನಿಸ್ಸಂಸಾರವ ಧರಿಸಿಪ್ಪವರಿಗಂಜುವೆ ಕಾಣಾ, ಸಕಳೇಶ್ವರಾ.