ಸರ್ವಾತ್ಮ ಚೈತನ್ಯವಪ್ಪ ಜಂಗಮದ ಪರಿಯ ನೋಡಾ:
ಅಖಂಡಬ್ರಹ್ಮದ ಬಯಲೆಲ್ಲಾ ತಾನಾಗಿ, ಸುಳಿವ ಮನ
ಎಲ್ಲೆಡೆಯಿಲ್ಲದೆ ನಿರ್ಗಮನಿಯಾದಲ್ಲಿ
ಒಂದಾಸೆಯೊಳಗಿಲ್ಲದವಿರಜ್ಞಾನಿ!
ಕುರಿತೊಂದಕ್ಕೆ ಸುಳಿವವನಲ್ಲ, ಭಕ್ತಿಗಮ್ಯನು,
ಉಳಿದ ಗಮನದ ತುರಿಯವಿಲ್ಲದೆ ತನ್ನ ನಿರ್ಗಮನದಿರವೆಂತೆಂದಡೆ:
ಚತುರಾಕಾರದ ಭೂಮಿಯೆ ಸುಖತಲ್ಪ ಮಂಚ,
ಆಕಾಶವೆ ಮೇಲುಕಟ್ಟು,
ಚಂದ್ರಸೂರ್ಯರೆ ಉಭಯ ಭಾಗದಲ್ಲಿ ಬೆಳಗುವ ಜ್ಯೋತಿ,
ಪರಿಣಾಮವೆ ತೃಪ್ತಿ, ದಿಕ್ಕುಗಳೆ ವಸನ,
ಸದ್ಗುಣವಾಸನೆಯೇ ಪರಿಮಳ, ನಕ್ಷತ್ರಂಗಳೆ ಪುಷ್ಪ,
ಶಿವತತ್ತ್ವಕಾಂತಿಯೆ ಆಭರಣ
ತ್ರಿಗುಣಕೂಟವೆ ತಾಂಬೂಲ,
ಜ್ಞಾನಶಕ್ತಿಯ ಸಂಗ, ಪ್ರಣವನಾದಗೀತ ಕೇಳಿಕೆ.
ಇಂತೀ ಅಷ್ಟಭೋಗೈಶ್ವರ್ಯದಲ್ಲಿಪ್ಪ ರಾಜಯೋಗಿ ಚರಲಿಂಗ,
ನಿಶ್ಚಿಂತ, ನಿರ್ವಾಣಿ, ನಿರಂಜನ, ನಿರ್ಮಾಯ,
ನಿರ್ವ್ಯಸನಿ ಪರಮಜಂಗಮನಂತಲ್ಲದೆ,
ಕಾಯದಿಚ್ಛೆಗೆ ಸುಳಿದು ಕಳವಳಿಸಿ
ತ್ರಿವಿಧಕ್ಕೆ ಬದ್ಧಕರಪ್ಪವರೆಲ್ಲಾ ಜಗತ್ಪಾವನರಪ್ಪರೇ ಹೇಳಾ
ಗುಹೇಶ್ವರಾ?
Transliteration Sarvātma caitan'yavappa jaṅgamada pariya nōḍā:
Akhaṇḍabrahmada bayalellā tānāgi, suḷiva mana
elleḍeyillade nirgamaniyādalli
ondāseyoḷagilladavirajñāni!
Kuritondakke suḷivavanalla, bhaktigamyanu,
uḷida gamanada turiyavillade tanna nirgamanadiraventendaḍe:
Caturākārada bhūmiye sukhatalpa man̄ca,
ākāśave mēlukaṭṭu,
candrasūryare ubhaya bhāgadalli beḷaguva jyōti,
pariṇāmave tr̥pti, dikkugaḷe vasana,
sadguṇavāsaneyē parimaḷa, nakṣatraṅgaḷe puṣpa,
śivatattvakāntiye ābharaṇa
triguṇakūṭave tāmbūla,
Jñānaśaktiya saṅga, praṇavanādagīta kēḷike.
Intī aṣṭabhōgaiśvaryadallippa rājayōgi caraliṅga,
niścinta, nirvāṇi, niran̄jana, nirmāya,
nirvyasani paramajaṅgamanantallade,
kāyadicchege suḷidu kaḷavaḷisi
trividhakke bad'dhakarappavarellā jagatpāvanarapparē hēḷā guhēśvarā?
Hindi Translation सर्वामा चैतन्य रहे जंगम की स्थिति देख :-
अखंड ब्रह्म के शून्य सब खुद बने,
बिना घूमें अवकाश न होने से निर्गमनी हो तो,
एक आशा में न रहा अविरलज्ञानी ।
लक्ष्य देकर घूमनेवाला नहीं, भक्ति गम्य है।
अन्य गमन के बिना, तुरीय बिना अपने निर्गमन की स्थिति
चतुराकार की भूमी ही सुख तुल्य पलंग,
आकाश ही वितान, चंद्रसूर्य ही उभय भाग में प्रकाश की ज्योति,
परिणाम ही तृप्ति, दिशा ही कपडे, सद्गुण वासना ही परिमल।
नक्षत्र ही पुष्प शिवतत्व कांति ही आवरण,
त्रिगुण कूट ही तांबूल, ज्ञान शक्ति का संग,
प्रणव नाद गीत को सुनना -
ऐसे अष्ट भोग ऐश्वर्य में रहे राजयोगि चरलिंग,
निश्चिंत, निर्वाणि, निरंजन, निर्माय निर्वयसनी परमजंगम,
बिना ऐसे - शरीर की इच्छा से घूमते व्याकुलता से
त्रिविधों को बद्ध रहे सब जगत्पावन बन सकते देवगुहेश्वरा ?
Translated by: Eswara Sharma M and Govindarao B N