Index   ವಚನ - 33    Search  
 
ಏರಿಯ ಕಟ್ಟಬಹುದಲ್ಲದೆ ನೀರ ತುಂಬಬಹುದೆ? ಕೈದುವ ಕೊಡಬಹುದಲ್ಲದೆ ಕಲಿತನವ ಕೊಡಬಹುದೆ? ವಿವಾಹವ ಮಾಡಬಹುದಲ್ಲದೆ ಪುರುಷತನವ ಹರಸಬಹುದೆ? ಘನವ ತೋರಬಹುದಲ್ಲದೆ ನೆನಹ ನಿಲಿಸಬಹುದೆ? `ಓದು ಒಕ್ಕಾಲು ಬುದ್ಧಿ ಮುಕ್ಕಾಲು' ಎಂಬ ಲೋಕದ ಗಾದೆಮಾತಿನಂತೆ, ಸದ್ಗುರುಕಾರುಣ್ಯವಾದಡೂ ಸಾದಿಸಿದವನಿಲ್ಲ, ಸಕಳೇಶ್ವರಾ.