Index   ವಚನ - 36    Search  
 
ಕಪ್ಪೆಗೆ ಕಾಲು ಬಂದಲ್ಲಿ ಫಲವೇನಯ್ಯಾ, ಚತುಃಪಾದಿಯಂತೆ ನಡೆಯಬಲ್ಲುದೆ? ಕೋಳಿಗೆ ಪುಕ್ಕ ಬಂದಲ್ಲಿ ಫಲವೇನಯ್ಯಾ, ಪಕ್ಷಿಯಂತೆ ಹಾರಬಲ್ಲುದೆ? ನಾಯಿಗೆ ಬಾಲ ಬಂದಲ್ಲಿ ಫಲವೇನಯ್ಯಾ, ಭಕ್ತಿಗುಣವಿಲ್ಲದಿದ್ದಡೆ ಭಂಗಿಯ ತಿಂದ ಭೂತನಂತೆ ಅಂಗವಿಕಾರಕ್ಕೆ ಹರಿವರು ಏತರಭಕ್ತರ ಮಕ್ಕಳು ಹೇಳಾ ಸಕಳೇಶ್ವರಯ್ಯಾ