Index   ವಚನ - 38    Search  
 
ಕರ್ತನೊಬ್ಬನೆ ದೇವ, ಸತ್ಯವೆ ಸುಭಾಷೆ, ಭೃತ್ಯಾಚಾರವೆ ಆಚಾರವಯ್ಯಾ. ಮತ್ತೆ ದೇವರಿಲ್ಲ, ಮತ್ತೆ ಆಚಾರವಿಲ್ಲ, ಮತ್ತೆ ಸುಭಾಷೆಯೆಂಬುದಿಲ್ಲ . ಮಹಂತ ಸಕಳೇಶ್ವರದೇವರನೊಲಿಸಿದ ಪುರಾತರ ಪಥವಿದು. ಅವಿತಥವಿಲ್ಲದೆ ನಂಬುವದು.