ಕುರುಹಿನ ರೂಹಿನ ಕೈಯಲ್ಲಿ ದರ್ಪಣವಿದ್ದಲ್ಲಿ ಫಲವೇನು?
ಒಂದಕ್ಕೆ ಜೀವವಿಲ್ಲ, ಒಂದಕ್ಕೆ ತೇಜವಿಲ್ಲ.
ಕಾರಣವರಿಯದ ನಿಃಕಾರಣ ಮನುಜರ ಕೈಯಲ್ಲಿ
ಲಿಂಗವಿದ್ದು ಫಲವೇನು?
ಅಂಗರಹಿತವಾದ ಸಂಗವನರಿಯರು.
ಸಂಗರಹಿತವಾದ ಸುಖವನರಿಯರು.
ನಿಸ್ಸಂಗಿ ನಿಂದ ನಿಲವ,
ಸಕಳೇಶ್ವರದೇವಾ, ನಿಮ್ಮ ಶರಣ ಬಲ್ಲ.
Art
Manuscript
Music
Courtesy:
Transliteration
Kuruhina rūhina kaiyalli darpaṇaviddalli phalavēnu?
Ondakke jīvavilla, ondakke tējavilla.
Kāraṇavariyada niḥkāraṇa manujara kaiyalli
liṅgaviddu phalavēnu?
Aṅgarahitavāda saṅgavanariyaru.
Saṅgarahitavāda sukhavanariyaru.
Nis'saṅgi ninda nilava,
sakaḷēśvaradēvā, nim'ma śaraṇa balla.