ಗಿರಿಯ ಕರದಿಂದೆತ್ತಿದಡೇನು?
ಹರಿವ ವಾರುಧಿಯನಾಪೋಷಣಂಗೊಂಡಡೇನು?
ಗಗನ ಗಮನದಲ್ಲಿ ಸುಳಿದಡೇನು?
ಇವರೆಲ್ಲರೂ ಪವನದ ಬಳಿಯಲಭ್ಯಾಸಿಗಳು.
ಅರ್ಚಿಸಿ, ಪೂಜಿಸುವ ಮಚ್ಚರದೊಳಗಣ ಲೌಕಿಕರ ಮೆಚ್ಚ,
ಸಕಳೇಶ್ವರದೇವ, ವೇಷಡಂಬಕರ.
Art
Manuscript
Music
Courtesy:
Transliteration
Giriya karadindettidaḍēnu?
Hariva vārudhiyanāpōṣaṇaṅgoṇḍaḍēnu?
Gagana gamanadalli suḷidaḍēnu?
Ivarellarū pavanada baḷiyalabhyāsigaḷu.
Arcisi, pūjisuva maccaradoḷagaṇa laukikara mecca,
sakaḷēśvaradēva, vēṣaḍambakara.