Index   ವಚನ - 70    Search  
 
ಧನವ ಪಡೆದು ವಿಭೋಗವನರಿಯದ ಲೋಭಿಗೆ ಸಿರಿಯೇಕೆ ಬಯಸುವಂತೆ? ಲೇಸ ಕಂಡು, ಮನ ಬಯಸಿ, ಪಂಚಭೂತಿಕ ಸುಯ್ದು ಮರುಗುವಂತೆ, ಕನ್ನೆ ಅಳಿಯಳು, ಕನ್ನೆ ಉಳಿಯಳು. ಜವ್ವನ ತವಕದಿಂದ ಅವಳು ಕಂಗಳ ತಿರುಹುತ್ತ ಮತ್ತೊಬ್ಬಂಗೊಲಿದಡೆ, ಅದೆಂತು ಸೈರಿಸುವೆ? ನಿಧಾನವ ಕಾಯ್ದಿಪ್ಪ ಬೆಂತರನಂತೆ ನೋಡಿ ಸೈರಿಸುವೆ? ಸಂಸಾರದಲ್ಲಿ ಹುಟ್ಟಿ, ಭಕ್ತಿಯನರಿಯದ ಭವದುಃಖಿಯ ಕಂಡು, ಸಕಳೇಶ್ವರದೇವ ನಗುವ.