Index   ವಚನ - 74    Search  
 
ನವಸಾಸಾ ಅತಿಬಳನೆಂದಡೆ, ಒಂದು ಕೇಶವ ಕಿತ್ತನೆ? ಶಿವನಿತ್ತ ಪಿಂಡವ, ಶ್ರೀರಾಮನು ಸೀತೆಗೆ ದಿಬ್ಯವನಿಕ್ಕಿಹೆನೆಂದು, ಹೋಮಕುಂಡಲದೊಳಗುರುಹಿದಡೆ, ಬ್ರಹ್ಮಾಂಡವನೊಡೆದು ಮರುಳುತಿದ್ದಲ್ಲಿ, ಉರಿನಾಲಗೆಯ ಕೀಳನೆ? ಪರಮನೊಲಿದ, ಪಶುಪತಿ ನಿರೂಪನೊಲಿದ, ಋಷಿಯನೊಂದು ವಾಕ್ಯದಿಂದ ಜಲ ಸಾಗರಂಗಳು ಬಂಧನಕ್ಕೆ ಬಾರವೆ, ನಳನೀಲರ ಕೈಯಲ್ಲಿ? ಈಶ್ವರನ ಶರಣರ ಘಾಸಿಮಾಡನೆನೆಂದಡೆ, ನೊಸಲಕ್ಕರವ ತೊಡೆಯರೆ? ಅಸುರನ ಪ್ರಹಾರವಿಡಿದು, ಹಿರಣ್ಯಾಕ್ಷನ ಕೊಂದು, ಶಿರವ ಹೋಗಾಡನೆ ನರಸಿಂಹನು? ಸ್ವತಂತ್ರನಯ್ಯಾ, ಸಕಳೇಶ್ವರದೇವ ನಿಮ್ಮ ಶರಣನು. ಸಿಡಿಲ ಸ್ವೀಕರಿಸನೆ ಶಿವಯೋಗಿ ಸಿದ್ಧರಾಮಯ್ಯನು?