ಮೆಕ್ಕೆ ಮಿನಿಕೆ ಮೊದಲಾಗಿ ಅವು ಪಕ್ವಕ್ಕೆ ಬಂದಡೆ, ವಿಷ ಬಿಡುವುದೆ?
ಸೋರೆ ವಾರಿಧಿ ಫಣಿ ಅವು ಹರೆಯ ಹಿರಿದಾದಡೆ, ಮನದ ವಿಷ ಬಿಡದು.
ಸಕಳೇಶ್ವರದೇವಾ, ನಿಮ್ಮ ನಿಜವನರಿಯದ ಮನುಜಂಗೆ,
ನರೆ ಹಿರಿದಾದಡೇನು, ಮನದ ಅವಗುಣ ಬಿಡದು.
Art
Manuscript
Music
Courtesy:
Transliteration
Mekke minike modalāgi avu pakvakke bandaḍe, viṣa biḍuvude?
Sōre vāridhi phaṇi avu hareya hiridādaḍe, manada viṣa biḍadu.
Sakaḷēśvaradēvā, nim'ma nijavanariyada manujaṅge,
nare hiridādaḍēnu, manada avaguṇa biḍadu.