Index   ವಚನ - 121    Search  
 
ಸದಾಚಾರದ ಬೆಂಬಳಿವಿಡಿದು ನಿಯತತ್ವದಲ್ಲಿ ನಡೆಯಬಹುದಲ್ಲದೆ, ಭಕ್ತನೆನಿಸಿಕೊಳಲುಬಾರದು. ಜ್ಞಾನದ ಉದಯದ ಸೌಕರ್ಯದ ನುಡಿಯ ನುಡಿಯಬುಹುದಲ್ಲದೆ, ಭಕ್ತನೆನಿಸಿಕೊಳಲುಬಾರದು. ಅತಿಶೀಲಸಂಬಂಧಿಯೆನಿಸಿಕೊಳಲುಬಹುದಲ್ಲದೆ, ಭಕ್ತನೆನಿಸಿಕೊಳಲುಬಾರದು. ಈ ತ್ರಿವಿಧವೂ ನಿಮ್ಮಲ್ಲಿ ಹೊದ್ದದೆ, ಬಸವಾ ಶರಣೆಂದು ಬದುಕಿದೆನಯ್ಯಾ, ಸಕಳೇಶ್ವರದೇವಾ.