Index   ವಚನ - 131    Search  
 
ಹರಗಣಂಗಳ ನೆರಹಿ ಮಾಡುವ ಮಾಟ, ಉರಿಯನಾಲಗೆ ಕೊರಳನಪ್ಪಿದಂತಾಯಿತ್ತಯ್ಯಾ. ಒಡೆದ ಮಡಕೆಯಲಮೃತವ ತುಂಬಿ, ಮುರುವ ಕುಟ್ಟಿ ಅಟ್ಟುಂಬ ತೆರನಂತಾಯಿತ್ತಯ್ಯಾ. ಭಕ್ತದೇಹಿಕದೇವ ಮನೆಗೆ ಬಂದಡೆ, ಮತ್ತೆ ಮಾಡಿಹೆನೆಂಬುದಿಲ್ಲವು. ಮೂಗಿಲ್ಲದ ಮುಖಕ್ಕೆ ಶೃಂಗಾರವ ಮಾಡಿದಂತಾಯಿತ್ತಯ್ಯಾ. ಶರಣಸನ್ನಹಿತ ಸಕಳೇಶ್ವರದೇವನ ಅರಿದೂ ಅರಿಯದಂತಿರ್ದಡೆ, ಮಳಲಗೌರಿಯ ನೋಂತು ನದಿಯಲ್ಲಿ ಬೆರಸಿದಂತಾಯಿತ್ತಯ್ಯಾ.