ಹಿರಿಯ ಅಡವಿಯ ಕಲ್ಲಗವಿಯ ಗಹ್ವರದೊಳಗೆ
ಬಿದಿರಲಳಿಗೆಯಲಗ್ಘವಣಿಯ ತಂದು,
ದೇವದಾರಿಯ ಗಂಧವ ತೇದು,
ತಾವರೆಯ ನೆಯ್ದಿಲ ಹೂವನೆ ತಂದು,
ಲಿಂಗವ ಸಿಂಗಾರವ ಮಾಡಿ,
ನೋಡುವದೆಂದು ದೊರಕೊಂಬುವುದೊ ಎನಗೆ?
ಸಕಳೇಶ್ವರದೇವಾ, ಮುಂದಿನ ವರವನೊಲ್ಲೆ.
ಇಂದು ಎನಗಿದು ಪರಮಸುಖವು.
Art
Manuscript
Music
Courtesy:
Transliteration
Hiriya aḍaviya kallagaviya gahvaradoḷage
bidiralaḷigeyalagghavaṇiya tandu,
dēvadāriya gandhava tēdu,
tāvareya neydila hūvane tandu,
liṅgava siṅgārava māḍi,
nōḍuvadendu dorakombuvudo enage?
Sakaḷēśvaradēvā, mundina varavanolle.
Indu enagidu paramasukhavu.