Index   ವಚನ - 21    Search  
 
ಉತ್ತಮಾಂಗವೆನಿಸುವ ಶಿರಸ್ಸಿಗೆ ನಿತ್ಯವಿದೆಂದು ಹೇಳಿತ್ತು ವೇದ. ನೆಟ್ಟನೆ ಶಿವನಡಿಗೆರಗುವುದು, ಮತ್ತನ್ಯದೈವಕ್ಕೆರಗಲಾಗದೆಂದುದು ವೇದ. ಓಂ ಯಸ್ಮೈನಮಃ ಸಚ್ಛಿರೋಧರ್ಮ ಮೂರ್ಧ್ನಿ ನಾನಾಬ್ರಹ್ಮೋತ್ತರಾ | ಹನು ಯಜ್ಞೋದರಾ ವಿಷ್ಣು ಹೃದಯಂ ಸಂವತ್ಸರ ಪ್ರಜನನಮ್ || ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲದೆ ಮತ್ತನ್ಯದೈವಕ್ಕೆರಗಿದಡೆ, ನಾಯಕನರಕ ತಪ್ಪದು.