ಎಲೆ ಸಿದ್ಧರಾಮಯ್ಯಾ, ಬಸವಣ್ಣನೆ ಶಿವನು,
ಶಿವನೆ ಬಸವಣ್ಣನಾದನಯ್ಯಾ.
ಬಸವಣ್ಣ ಚನ್ನಬಸವಣ್ಣ ಪ್ರಭುದೇವರು ಮಡಿವಾಳಯ್ಯ
ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳ
ಶ್ರೀಪಾದಕ್ಕೆ ಅಹೋರಾತ್ರಿಯಲ್ಲಿ ನಮೋ ನಮೋ
ಎನುತಿರ್ದೆನಯ್ಯಾ, ಬಸವಣ್ಣಪ್ರಿಯ
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Ele sid'dharāmayyā, basavaṇṇane śivanu,
śivane basavaṇṇanādanayyā.
Basavaṇṇa cannabasavaṇṇa prabhudēvaru maḍivāḷayya
mukhyavāda ēḷnūreppattamaragaṇaṅgaḷa
śrīpādakke ahōrātriyalli namō namō
enutirdenayyā, basavaṇṇapriya
kūḍalacennasaṅgamadēvā.