ಕರ್ಮದಿಂದ ಬೊಮ್ಮದಿಂದ ಪುತ್ರರಿಂದ ಗೋತ್ರದಿಂದ
ಕಳತ್ರಯರಿಂದ ಗತಿಯಾಗದೆಂದು ಸಾರಿತ್ತು ಯಜುರ್ವೇದ.
ಅಪಾಧಿಯನಿಟ್ಟು ನಿರುಪಾಧಿಕನಾಗಿ,
ಅಂಗವನಾರಾಧಿಸಿ ನಿತ್ಯರಾದರೆಂದು ಸಾರಿತ್ತು ಯಜುರ್ವೇದ.
'ಓಂ ನ ಕರ್ಮಣಾ ನ ಪ್ರಜಾಯಾಧನೇನ ತ್ಯಾಗೇನೈಕೇನ
ಅಮೃತತ್ವಮಾನಶುಃ' ಎಂದುದು ಶ್ರುತಿವಾಕ್ಯ.
ಈ ಪರಿಯಲಿ ವೇದ ಹೊಗಳಲ್ಕೆ,
ಎಮ್ಮ ಪುರಾತನರು ನಡೆದರು,
ನಡೆದು ಮೆರೆಯಿತ್ತು, ಕಂಡು ನಂಬರು,
ಬಸವಪ್ರಿಯ ಕೂಡಲಚೆನ್ನಸಂಗಯ್ಯ.
Art
Manuscript
Music
Courtesy:
Transliteration
Karmadinda bom'madinda putrarinda gōtradinda
kaḷatrayarinda gatiyāgadendu sārittu yajurvēda.
Apādhiyaniṭṭu nirupādhikanāgi,
aṅgavanārādhisi nityarādarendu sārittu yajurvēda.
'Ōṁ na karmaṇā na prajāyādhanēna tyāgēnaikēna
amr̥tatvamānaśuḥ' endudu śrutivākya.
Ī pariyali vēda hogaḷalke,
em'ma purātanaru naḍedaru,
naḍedu mereyittu, kaṇḍu nambaru,
basavapriya kūḍalacennasaṅgayya.