Index   ವಚನ - 38    Search  
 
ಚಾಂಡಾಲನಾದಡೇನು ಶಿವಭಕ್ತನೆ ಕುಲಜನು. ಆತನೊಡನೆ ನುಡಿಗಡಣವ ಮಾಡೂದೆನುತಿ[ದೆ] ವೇದ ಶ್ರುತಿ. ಕುಲವ ನೋಡಲು ಬೇಡ, ಛಲವ ನೋಡಲು ಬೇಡ. ಎಲ್ಲರಿಂದ ಹಿರಿಯರು ಆತನಿದ್ದಲ್ಲಿ ಇರುತಿಪ್ಪುದೆನುತಿ[ದೆ] ವೇದ. ಓಂ ಅಪಿ ವಾ ಯಶ್ಚಾಂಡಾಲಶ್ಶಿವ ಇತಿ ವಾಚಂ ವದೇತ್ತೇನ ಸಹ ಸಂವಿಶೇತ್ತೇನ ಸಹ ಭುಂಜೇತ್ ತೇನ ಸಹ ಸಂವದೇತ್ || ಇಂತೆನುತಿದ್ದುದು ಶ್ರುತಿವಾಕ್ಯ. ನಮ್ಮ ಭಕ್ತರನು ಅವರಿವರೆಂದು ಕುಲವನೆತ್ತಿ ನುಡಿದಂಗೆ, ಇಪ್ಪತ್ತೇಳುಕೋಟಿನರಕ ತಪ್ಪದು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.