Index   ವಚನ - 40    Search  
 
ತಿಥಿವಾರವೆಂದರಿಯೆನಯ್ಯಾ, ಲಗ್ನವಿಲಗ್ನವೆಂದರಿಯೆನಯ್ಯಾ. ಇದನರಿತು ಹದಿನಾರು ವಾರ, ಹದಿನೆಂಟು ಕುಲವೆಂದೆಂಬರು. ನಾವಿದನರಿಯೆವಯ್ಯಾ, ಇರುಳೊಂದು ವಾರ, ಹಗಲೊಂದು ವಾರ. ಭವಿಯೊಂದು ಕುಲ, ಭಕ್ತನೊಂದು ಕುಲ, ನಾವು ಬಲ್ಲುದು ಇದು ತಾನೆ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.