Index   ವಚನ - 47    Search  
 
ದ್ವಿಜರೊಮ್ಮೆ ಮರೆದು ನೀಳಬೊಟ್ಟನಿಟ್ಟರಾದಡೆ, ಅದರ ಪರಿಯಲೆ ಅಸಿಯ ಗರಗಸವ ಮಾಡಿ, ಯಮಕಿಂಕರರು ಸೀಳುವರೆಂದುದು ನೋಡಾ. ಸ್ಕಾಂದೇ: ಊರ್ಧ್ವಪುಂಡ್ರಂ ದ್ವಿಜಂ ಕುರ್ಯಾತ್ ಲೀಲಯಾಪಿ ಕದಾಚನ | ತಥಾ ಕಾಲೇಣ ಶಸ್ತ್ರೇಣ ಬಾಧ್ಯತೇ ಯಮಕಿಂಕರೈಃ || ಊರ್ಧ್ವಪುಂಡ್ರಂ ಚ ಶೂಲಂ ಚ ವರ್ತುಲಂ ಚಾರ್ಧಂಚಂದ್ರಕಮ್ | ಲಲಾಟೇ ಧಾರಯಿಷ್ಯಂತಿ ಮನುಷ್ಯಾಃ ಪಾಪಕರ್ಮಿಣಃ || ಇದನರಿದಿನ್ನು ದ್ವಿಜರು ನಂಬಿ, ಬೇಗ ವಿಭೂತಿಯನಿಟ್ಟು ಬದುಕಿ, ಬಸವಪ್ರಿಯ ಕೂಡಲಚೆನ್ನಸಂಗನನೊಲಿಸುವಡೆ.