Index   ವಚನ - 50    Search  
 
ನಿನ್ನಳವಲ್ಲ, ಎನ್ನಳವಲ್ಲ, ಇದಾರಳವಲ್ಲದ ಘನವು ನೋಡಯ್ಯಾ; ಕಾಬಡೆ ಕಂಗಳಿಗೆ ಅಸಾಧ್ಯ, ಮುಟ್ಟುವಡೆ ಸೋಂಕಿಂಗಸಾಧ್ಯ, ಮಾತನಾಡಿಸಿ ನೋಡಿದಡೆ ವಾಙ್ಮನಾತೀತ, ನಿಂದಡೆ ನೆಳಲಿಲ್ಲ, ಸುಳಿದಡೆ ಹೆಜ್ಜೆಯಿಲ್ಲ, ಪ್ರಭುದೇವರೆಂಬ ಭಾವ ತೋರುತ್ತದೆ. ಬಸವಪ್ರಿಯ ಕೂಡಲಚೆನ್ನಸಂಗನ ಶರಣರ ಚರಣವ ಪಿಡಿಯಲೇಳಾ ಸಂಗನಬಸವಣ್ಣಾ.