•  
  •  
  •  
  •  
Index   ವಚನ - 1568    Search  
 
ಸೂಳೆ ಹಲಬರನು ಉಳಿದಳೆಂದು ನಿಂದಿಸಲಿಲ್ಲ ಕೇಳಾ. ಪತಿವ್ರತೆ ತನ್ನ ಪುರುಷನಲ್ಲದೆ ಮತ್ತೊಬ್ಬನ ಮುಖವ ನೋಡಿದಡೆ ಅವಳ ಚಾಂಡಾಲಗಿತ್ತಿ ಎಂಬುದು ಲೋಕವೆಲ್ಲವು. ಕೀರ್ತಿವಾರ್ತೆಗೆ ಮಾಡುವ ಭಕ್ತ ತಪ್ಪಿದಡೆ ಅದ ಮನಕ್ಕೆ ತರಲಿಲ್ಲ. ಸಜ್ಜನ ಸದ್ಭಕ್ತನೆಡಹಿದಡೆ ಅದ ಸೈರಿಸಬಾರದು ಕೇಳಾ. ನಮ್ಮ ಗುಹೇಶ್ವರಲಿಂಗಕ್ಕೆ ಆದಿಯಿಂದತ್ತತ್ತ ನೀನೆ ಭಕ್ತನಾದ ಕಾರಣ ಮನ ನೊಂದಿತ್ತು ಕಾಣಾ ಸಂಗನಬಸವಣ್ಣಾ.
Transliteration Sūḷe halabaranu uḷidaḷendu nindisalilla kēḷā. Pativrate tanna puruṣanallade mattobbana mukhava nōḍidaḍe avaḷa cāṇḍālagitti embudu lōkavellavu. Kīrtivārtege māḍuva bhakta tappidaḍe ada manakke taralilla. Sajjana sadbhaktaneḍahidaḍe ada sairisabāradu kēḷā. Nam'ma guhēśvaraliṅgakke ādiyindattatta nīne bhaktanāda kāraṇa mana nondittu kāṇā saṅganabasavaṇṇā.
Hindi Translation वेश्या कइयोंके साथ रहने पर भी निंदा नहीं करते सुन पतिव्रता स्त्री अपने पुरुष के बिना और एक का मुख देखे तो, उसे चांडाली कहेंगे सारा लोक । कीर्तिवार्ता से करने वाला भक्त छूके तो उसे मन में नहीं लेते।। सज्जन सद्‌भक्त टोकर खाये तो उसे सह नहीं सकते सुन । हमारे गुहेश्वर लिंग का आदी से उधर उधर पर तू ही भक्त बने कारण मन दुःखित हुआ था देख संगनबसवण्णा। Translated by: Eswara Sharma M and Govindarao B N