Index   ವಚನ - 56    Search  
 
ಪರಶಿವನ ಚಿತ್ಕಲೆ ಜಗತ್ತಿನ ಶಿರೋಮಧ್ಯಕ್ಕೆ ಬಿಂಬಿಸಿ, ಅದಕ್ಕೆ ಚೈತನ್ಯಗೊಳಿಸಿದಲ್ಲಿ, ಅದೇ ಪರಮಾತ್ಮನಾಯಿತ್ತು. ಆ ಪರಮಾತ್ಮನೆ ಜಗತ್ತಿನ ಭ್ರೂಮಧ್ಯಕ್ಕೆ ಬಿಂಬಿಸಿದಲ್ಲಿ, ಅದೇ ಅಂತರಾತ್ಮನಾಯಿತ್ತು. ಆ ಅಂತರಾತ್ಮನೇ ಜಗತ್ತಿನ ಹೃದಯಕ್ಕೆ ಬಿಂಬಿಸಿದಲ್ಲಿ, ಅದೇ ಜೀವಾತ್ಮನಾಯಿತ್ತು. ಆ ಜೀವಾತ್ಮನೇ ಘಟ, ಅಂತಾರಾತ್ಮನೇ ಪ್ರಾಣ, ಪರಮಾತ್ಮನೇ ಸರ್ವಸಾಕ್ಷಿಕ. ಆ ಸಾಕ್ಷಿಕನೇ ವಸ್ತು, ಆ ಪರಸ್ತು. ಈ ಜೀವಾಂತರಾದಿಗಳೆಂಬ ಅಂಗಪ್ರಾಣಕ್ಕೆ ಪಂಚವಿಂಶತಿತತ್ವಂಗಳೆಂಬ ಪಾಶವಂ ತೊಡಿಸಿ, ಅಂತದನೇ ಪಶುವೆನಿಸಿ, ತಾನದಕ್ಕೆ ಪತಿಯಾಗಿ, ಅಲ್ಲಿ ನಾನಾ ವಿನೋದಂಗಳಂ ವಿನೋದಿಸಿತ್ತು. ಅದೆಂತೆಂದಡೆ: ವಿದ್ಯುದ್ರೂಪಮಿವಾಕಾಶೇ ಪ್ರತ್ಯಕ್ಷಂ ಸರ್ವತೋಮುಖ್ಯೆಃ | ಶಿವತತ್ತ್ವಮಿದಂ ಪ್ರೋಕ್ತಂ ಸರ್ವತತ್ತ್ವಾಲಯಂ ವಿದುಃ || ಜೀವಾಂತರಪರಾತ್ಮೇತಿ ತ್ರಿಭಿರ್ನಾಮಭಿರುಚ್ಯತೇ | ಆತ್ಮಸ್ವಜೀವ ಸಂಬಂಧಶ್ಚಾಂತರಃ ಪ್ರಾಣಸಂಯುತಃ || ಪರಮಾತ್ಮಾ ತತ್ತ್ವಸಂಯುಕ್ತಃ ಆತ್ಮತ್ರಯಮಿದಂ ಶೃಣು | ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಯ್ಯನು ಇಂತೀ ಪರಿಯಲ್ಲಿ ಅಡಗಿರ್ದ, ಸರ್ವಜಗತ್ತನ್ನು.