Index   ವಚನ - 85    Search  
 
ಶಿವನಲ್ಲದೆ ಮತ್ತೆ ದೈವವಿಲ್ಲೆಂಬುದು ದಕ್ಷನ ಜನ್ಮವು ತಾನೆ ಹೇಳದೆ ಉಳ್ಳಡೆ? ಕ್ರತುವೇನು ಕಾಯಲಾಗದೆ ಉಳ್ಳಡೆ? ತಮ್ಮ ಶಿರಂಗಳು ಹೋಗೊಡಲೇಕೆ? ಈ ಕ್ರಮಂಗಳೆಲ್ಲ ಶಿವನೇ ಒಡೆ[ಯ]ನೆಂದುದು ಋಗ್ವೇದ. ಅವೋ ರಾಜಾನಮಸ್ಯ ರುದ್ರಂ ಹೋತಾರಂ ಮದ್ವಸತ್ಯಯಜುಗಂ | ರೋದಸ್ಯೋಃ ಅಗ್ನಿಂ ಪುರಾತನಯಿತೋರಚಿತಾದ್ವಿರಣ್ಯರೂಪಮವಸೇ ಯಜದ್ವಂ |ಎಂಬ ಶ್ರುತಿಯಿದೆ ಇದು ಕಾರಣ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲದಿಲ್ಲಾ.