Index   ವಚನ - 87    Search  
 
ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ ಎಂಬುದು ವೇದವೇ ಅಲ್ಲ.ಪ್ರತ್ಯಕ್ಷ ನಿಲ್ಲು, ಮಾಣು. ಸಂಜೆ ಸಾವಿರ ಪಾಠವೆಂಬಲ್ಲಿಯೆ ತಾನು ಕಟ್ಟುಕ. ವೇದವೆರಡುಂಟೆ, ದೈವವೆರಡುಂಟೆ? ಒಂದೆಯಲ್ಲದೆ. ಧ್ಯಾನ ಪೂಜಿಯೊಂದೆಯಲ್ಲದೆ ಎರಡುಂಟೆ? `ಏಕ ಏವ ರುದ್ರೋ ನ ದ್ವಿತೀಯಾಯ ತಸ್ತೆ' ಎಂಬ ಶ್ರುತಿಯಿರಲು, ಶಿವನೊಬ್ಬನಲ್ಲದೆ ಇಬ್ಬರುಂಟೆ? `ಶಿವ ಏಕೋ ಧ್ಯೇಯಶ್ಶಮಕರಸ್ಸರ್ವಮನ್ಯತ್ ಪರಿತ್ಯಜೇತ್' ಎಂದುದಾಗಿ, ವೇದವೆರಡುಂಟೆಂದು ಹೇಳಿ, ತೋರುವವನ ಬಾಯಲಿ ಎಡದ ಕಾಲ ಕೆರ್ಪನಿಕ್ಕುವೆ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.