ಅಂಗವಳಿದು ಸುಸಂಗವಾಗಲಾಗಿ,
ಸಂದೇಹಿಗಳ ಸಂದೇಹ ಬಿಟ್ಟಿತ್ತು, ನಿಸ್ಸಂದೇಹವಾಯಿತ್ತು.
ಅದೆಂತೆಂದಡೆ;ತೋರುವ ತೋರಿಕೆ ತಾನೆಯಾದ ಕಾರಣ.
ಸಕಲದೊಳಗಿರ್ದು ನಿಃಕಲದ ರೂಪ ನಿರ್ಧರವೆಂದು ಭಾವಿಸಿ,
ಅರಿದರುಹಿಸಿಕೊಂಬವ ತಾನು ತಾನೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
Art
Manuscript
Music
Courtesy:
Transliteration
Aṅgavaḷidu susaṅgavāgalāgi,
sandēhigaḷa sandēha biṭṭittu, nis'sandēhavāyittu.
Adentendaḍe;tōruva tōrike tāneyāda kāraṇa.
Sakaladoḷagirdu niḥkalada rūpa nirdharavendu bhāvisi,
aridaruhisikombava tānu tāne,
sagarada bom'manoḍeya tanumana saṅgamēśvarā.