ಅನ್ಯರು ಮಾಡಿದ ಸುರೆಯ ಕೊಂಡು,
ಜಗ ತನ್ನ ತಾನರಿಯದಿರೆ,
ತನ್ನಲ್ಲಿ ಒದಗಿದ ಮೂರು ಸುರೆಯ ಕೊಂಡು, ಸುರನಾಥನನರಿಯದಿರೆ,
ತ್ರಿವಿಧದ ಸುರತಕ್ಕೊಳಗಾಹ ಸುರಭಾವಿಗಳ ಹರಹಿಗೆ ಸಿಕ್ಕ,
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗವು.
Art
Manuscript
Music
Courtesy:
Transliteration
An'yaru māḍida sureya koṇḍu,
jaga tanna tānariyadire,
tannalli odagida mūru sureya koṇḍu, suranāthananariyadire,
trividhada suratakkoḷagāha surabhāvigaḷa harahige sikka,
sagarada bom'manoḍeya
tanumana saṅgamēśvaraliṅgavu.