Index   ವಚನ - 12    Search  
 
ಎನ್ನ ಮನೆ ಮಾಳವಾಯಿತ್ತಯ್ಯಾ, ಎನ್ನ ಹೊಲ ಬೆಳೆಗೆಟ್ಟಿತ್ತಯ್ಯಾ. ಎನ್ನ ಭಕ್ತಿಯಭಕ್ತಿಯಾಯಿತ್ತಯ್ಯಾ, ಸತ್ತು ಚಿತ್ತು ಹೆಣದಂತಾಯಿತ್ತಯ್ಯಾ. ನಿಮ್ಮೊಳಾನು ಬೆರೆದು ಬೇರಿಲ್ಲದೆ ನೆಲೆಗೆಟ್ಟೆನಯ್ಯಾ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.