Index   ವಚನ - 21    Search  
 
ಕರಣಂಗಳ ಕಾಳಿಕೆಯಳಿದುದೆ ನಿರಂಜನದ ಬೆಳಗಯ್ಯಾ. ಊಧ್ರ್ವಮಧ್ಯದಲ್ಲಿ ತಿರುಗಾಡುವ ಹಂಸನ ಶಂಕೆಯ ಹರಿದುದೆ, ಅಖಂಡಿತದ ಕಡ್ಡಿವತ್ತಿಯ ತುದಿವೆಳಗಯ್ಯಾ. ಓಂಕಾರವೆ ದಿವ್ಯಸಂಚಾರವಯ್ಯಾ. ಶ್ರುತಿಸ್ಮೃತಿತತ್ವವೆ ಸಕಲನಾದಪೂಜೆಯಯ್ಯಾ. ಎನ್ನ ಸಕಲೇಂದ್ರಿಯ ಭಾವಚ್ಛೇದನವೆ ನಿಮಗಾಲವಟ್ಟವಯ್ಯಾ. ಎನ್ನ ಚಿತ್ತ ಸುಚಿತ್ತವಾದುದೆ ನಿಮಗೆ